ಕಿರುತೆರೆ- ಟಿವಿ ಚಂದನವನ- ಸ್ಯಾಂಡಲ್‌ವುಡ್ ಸಿನಿಮಾ-ಮನರಂಜನೆ

“ಅದೊಂದಿತ್ತು ಕಾಲ’ವಿತ್ತು ಅಂತ ಬೆಳ್ಳಿತೆರೆಗೆ ಹಾರಿದ ರೌಡಿ ಬೇಬಿ

ಗಟ್ಟಿಮೇಳ ಧಾರವಾಹಿಯ ಮೂಲಕ ವೀಕ್ಷಕರ ಮನಸು ಗೆದ್ದಿರೋ ರೌಡಿ ಬೇಬಿ ಬೆಳ್ಳಿತೆರೆಗೆ ಹಾರಲು ಸಜ್ಜಾಗುತ್ತಿದ್ದಾರೆ.
ಹೌದು ನಿಶಾ ರವಿ ಕೃಷ್ಣನ್ ಅಲಿಯಾಸ್ ಅಮೂಲ್ಯ ಇದೀಗ ವಿನಯ್ ರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದು, ವಿನಯ್ ರಾಜ್ ಕುಮಾರ್ ಅಭಿನಯದ ‘ಅದೊಂದಿತ್ತು ಕಾಲ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ.

“ಇದೇ ಮೊದಲ ಬಾರಿ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದೇನೆ. ವಿನಯ್ ರಾಜ್ ಕುಮಾರ್ ಅವರ ಜೊತೆ ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಇಂತಹ ಸುವರ್ಣಾವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ” ಎಂದು ನಿಶಾ ಹೇಳಿಕೊಂಡಿದ್ದಾರೆ.

ಮೂರು ಕಾಲಘಟ್ಟದಲ್ಲಿ ಈ ಸಿನಿಮಾ ನಡೆಯಲಿದ್ದು ಇದರಲ್ಲಿ ಬಾಲ್ಯದ ತುಂಟತನದ ಜೊತೆಗೆ ಯೌವ್ವನದ ಸೆಳೆತವನ್ನು ವಿವರಿಸಲಾಗಿದೆ. ಇದರಲ್ಲಿ ಶಾಲಾ ಹುಡುಗಿಯಾಗಿ ನಿಶಾ ಅಭಿನಯಿಸಲಿದ್ದಾರೆ. “ಅದೊಂದಿತ್ತು ಕಾಲ’ ಚಿತ್ರದಲ್ಲಿ ನಾನು 90 ರ ಕಾಲಘಟ್ಟದ ಹುಡುಗಿಯಾಗಿ ನಟಿಸಲಿದ್ದೇನೆ. ಚಿತ್ರಕಥೆ ಬಹಳ ವಿಭಿನ್ನ ಎನಿಸಿದ ಕಾರಣ ನಾನು ಈ ಸಿನಿಮಾ ಒಪ್ಪಿಕೊಂಡೆ” ಎಂದು ನಿಶಾ ಹೇಳಿದ್ದಾರೆ.

Related posts

ಡ್ರಗ್ಸ್ ಪ್ರಕರಣ: ನಟಿ ಸಂಜನಾ ಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್

Harshitha Harish

ಮೊದಲ ಬಾರಿಗೆ ನಟಿ ನಿಧಿ ಸುಬ್ಬಯ್ಯ ಹಾರರ್ ಸಿನಿಮಾಕ್ಕೆ ಒಪ್ಪಿಗೆ

Harshitha Harish

ಕರಾವಳಿಯಲ್ಲಿ ಅಲೆ ಎಬ್ಬಿಸಿರುವ ಟೆಲಿ ಚಿತ್ರ ‘ಗರ್ವ’: ನಾಳೆ (ಏ.4) ರಿಲೀಸ್

Upayuktha