ಗ್ರಾಮಾಂತರ ಧರ್ಮ-ಅಧ್ಯಾತ್ಮ ಸಮುದಾಯ ಸುದ್ದಿ ಸ್ಥಳೀಯ

ಕಣಿಯೂರು ಬ್ರಹ್ಮ ಕಲಶೋತ್ಸವ: ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಮಹಾಬಲ ಶ್ರೀಗಳು

ವಿಟ್ಲ: ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ  ಬ್ರಹ್ಮಕಲಶೋತ್ಸವ ಎಪ್ರಿಲ್ ತಿಂಗಳಲ್ಲಿ ನಡೆಯಲಿದೆ.

ಈ ಹಿನ್ನಲೆಯಲ್ಲಿ ಕಣಿಯೂರು ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಸೇರಿದಂತೆ ದೇವಳದ ವಿವಿಧ ಸಮಿತಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಡಾ|ವೀರೇಂದ್ರ ಹೆಗ್ಗಡೆಯವರೊಂದಿಗೆ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ನಡೆಸಿದರು.

ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಕೆಯ್ಯೂರು ನಾರಾಯಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು, ಉಪಾಧ್ಯಕ್ಷರಾದ ಯಶೋಧರ ಬಂಗೇರ, ಹರೀಶ್ ಪೂಜಾರಿ ಬಾಕಿಲ,  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ,  ಟ್ರಸ್ಟಿ ಜಯಾನಂದ ಪೂಜಾರಿ ಕಣಿಯೂರು, ನಾಗರಾಜ ಕಣಿಯೂರು, ಜಯರಾಮ ಕುಂಟ್ರಕ್ಕಳ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕನ್ಯಾನ ವಲಯ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಉಡುಪಿ ಕೃಷ್ಣನಿಗೆ ಬಿಡುಗಡೆ ಭಾಗ್ಯ…: ಕೃಷ್ಣಮಠದಲ್ಲಿ ವಸಂತೋತ್ಸವ ಮತ್ತು ವಿದ್ಯಾಮಾನ್ಯತೀರ್ಥರ ಸರಳ ಆರಾಧನೋತ್ಸವ

Upayuktha

ಕನ್ನಡ ಶಾಲೆಗಳಲ್ಲಿ ಮಲಯಾಳಂ ಶಿಕ್ಷಕರ ನೇಮಕ ವಿರುದ್ಧ ಮಂಜೇಶ್ವರ ಬ್ಲಾಕ್ ಪಂಚಾಯತ್ ನಿರ್ಣಯ

Upayuktha

ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸುತ್ತದೆ: ಡಾ|| ಚೂಂತಾರು

Upayuktha