ಲೇಖನಗಳು

ಕನ್ನಡದ ಧೀಮಂತ ಕವಿ ಡಾ. ಎನ್‌ಎಸ್‌ ಲಕ್ಷ್ಮೀನಾರಾಯಣ ಭಟ್ಟರಿಗೆ ಭಾವನಮನ

ಕನ್ನಡದ ಧೀಮಂತ ಮತ್ತು ಪ್ರಗಲ್ಭ ಕವಿ ಸಾಹಿತಿ ಪ್ರಾಧ್ಯಾಪಕ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ಇಂದು ಶನಿವಾರ ನಮ್ಮನ್ನಗಲಿದರು ಎಂಬ ವಿಷಯ ಸ್ವಲ್ಪ ತಡವಾಗಿಯೇ ತಿಳಿದು ಮನಸ್ಸು ತುಂಬ ಭಾರವಾಯಿತು; ಒಂದು ಕ್ಷಣ ಸುತ್ತಮುತ್ತ ಮತ್ತು ಮನಸ್ಸಿನ ಒಳಗೆ ನಿರ್ವಾತ ಭಾವ ಸೃಷ್ಟಿಯಾಯಿತು.

ಬಹಳ ವರ್ಷಗಳ ಕಾಲ ನಿರಂತರ ಕನ್ನಡ ತಾಯಿಗೆ ನುಡಿತೋರಣ ಕಟ್ಟಿ, ಕನ್ನಡ ಘನತೆಯನ್ನು ತಮ್ಮ ಸಾಹಿತ್ಯದ ಮೂಲಕ ಬಾನೆತ್ತರಕ್ಕೇರಿಸಿದ ಹೆಮ್ಮೆಯ ಕವಿ ಭಟ್ಟರು.

ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ, ನೀ….ನಿಲ್ಲದೇ ಬಾಳೊಂದು ಬಾಳೇ ಕೃಷ್ಣಾ..?? ಎಲ್ಲಿ ಜಾರಿತೋ ಮನವೂ…. ಮೊದಲಾದ ಚಿರಸ್ಮರಣೀಯ ಸಾಲು ಸಾಲು ಭಾವಪೂರ್ಣ ರಸಹೂರಣ ಭರಿತ ಕವನಗಳನ್ನು ಹೆಣೆದು ಬಹುಕಾಲ ಕನ್ನಡ ಭಕ್ತರ ಬಾಯಲ್ಲಿ ಗುನುಗುಟ್ಟುವಂತೆ ಮಾಡಿದ ಮತ್ತು ಅಸಂಖ್ಯ ಕನ್ನಡಿಗರಿಗೆ ಕನ್ನಡದ ಸೌಂದರ್ಯವನ್ನು ಅನನ್ಯವೆಂಬಂತೆ ಬಗೆಬಗೆದು ತೋರಿಸಿದ ಅದ್ಭುತ ಕವಿ ನಮ್ಮ‌ ಲಕ್ಷ್ಮೀನಾರಾಯಣ ಭಟ್ಟರು…

ನಿಮ್ಮ ಕೃತಿಗಳ ಮೂಲಕ ಕನ್ನಡದ ಕೋಟ್ಯಂತರ ಮನಸ್ಸು ಭಾವ ಹೃದಯಗಳಲ್ಲಿ ಚಿರಾಯುವಾದಿರಿ ಧನ್ಯರು ತಾವು ಧನ್ಯರು. ತಮ್ಮಿಂದ ಕನ್ನಡ ನೆಲವೂ ಧನ್ಯವಾಯಿತು
ಇನ್ನೇನ್ನೂ ಹೇಳಲಾರೆ ಭಟ್ಟರೇ, ಹೇಳಲಾರೆ… ನಿಮ್ಮ ಅದ್ಭುತ ಅನ್ಯಾದೃಶ ಅನುಪಮ ಕನ್ನಡ ಸಾಹಿತ್ಯ ಸೇವೆಗೆ ಶ್ರದ್ಧೆಯ ಪ್ರಣಾಮಗಳು.

ಹೋಗಿ ..ಬನ್ನಿ ಭಟ್ಟರೇ …ನಿಮ್ಮ ದಿವ್ಯಾತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ
ಓಂ ಶಾಂತಿಃ

-ಜಿ ವಾಸುದೇವ ಭಟ್ ಪೆರಂಪಳ್ಳಿ

 

Related posts

ರಕ್ತದಾನಿಗಳ ದಿನ: ರಕ್ತದಾನಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ

Upayuktha

ನಾಲಿಗೆ ಹೇಳುತ್ತೆ ನಿಮ್ಮ ಆರೋಗ್ಯ ಸ್ಥಿತಿಯನ್ನು… ಹೀಗಳೆಯಬೇಡಿ ನಾಲಿಗೆಯನ್ನು..

Upayuktha

ಇಡಿಯೋಪಥಿಕ್ ಪಲ್ಮೊನರಿ ಫೈಬ್ರೊಸಿಸ್ (ಶ್ವಾಸಕೋಶ ಗಡುಸಾಗುವ ಕಾಯಿಲೆ)

Upayuktha