ಕತೆ-ಕವನಗಳು

ಗಝಲ್: ದೀಪ ಹಚ್ಚಿದ ಮಗಳು

ಹುಟ್ಟಿದ ಮನೆಯಲಿ ನಗುವಿನ
ದೀಪಹಚ್ಚಿದೆಯಾ ಮಗಳೇ.
ಮೆಟ್ಟಿದ ಮನೆಯಲಿ ಒಲವಿನ
ದೀಪಹಚ್ಚಿದೆಯಾ ಮಗಳೇ.

ಕವಿತೆಗಳ ಬರೆಯುತ ಅರಿವಿನ
ಬೆಳಕು ಚೆಲ್ಲಿದೆ.
ಮಮತೆಯ ತೈಲವೆರೆಯುತ ನಲಿವಿನ ದೀಪಹಚ್ಚಿದೆಯಾ ಮಗಳೇ.

ಇನಿಯನ ಎದೆಯಲಿ ಮಧುವಿನ ಚಿಲುಮೆಚಿಮ್ಮಿದೆ.
ದನಿಯನು ತುಂಬುತ ನಿಲುವಿನ ದೀಪಹಚ್ಚಿದೆಯಾ ಮಗಳೇ.

ಮಗುವಿನ ಜೊತೆಯಲಿ ಹಿತವಾದ ಬಂಧಪಡೆದೆ.
ಬಾಂಧವ್ಯದ ಸವಿಯಲಿ ಹರಿವಿನ ದೀಪಹಚ್ಚಿದೆಯಾ
ಮಗಳೇ.

ಸಾಧನೆಯ ಪಥದಲಿ ಗೆಲುವಿನ
ಬಲವನೀಡಿದೆ.
ದೇವಿಯ ನೆನೆಯುತಲಿ ಚೆಲುವಿನ ದೀಪಹಚ್ಚಿದೆಯಾ ಮಗಳೇ.

-ಗಾಯತ್ರಿ, ಪಳ್ಳತ್ತಡ್ಕ

Related posts

ಕವನ: ಪ್ರಯಾಣ

Upayuktha

ಕವನ: ತಾಯಿ ಪಾಠ

Upayuktha

ಹನಿಗವನ: ಆಪತ್ಕಾಲ..!!

Upayuktha

Leave a Comment

error: Copying Content is Prohibited !!