ಇತ್ತೀಚೆಗೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಸದ್ದು ಮಾಡುತ್ತಿದ್ದಾರೆ. ಇದರೊಂದಿಗೆ ಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ಪ್ರಾರಂಭ ಆಗುತ್ತಿದ್ದು, ವಿಭಿನ್ನ ಪ್ರೋಮೊದಿಂದ ಬಾದ್ ಷಾ ಗಮನ ಸೆಳೆಯುತ್ತಿದ್ದಾರೆ.
ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಭವಿಷ್ಯವನ್ನು ಹೇಳಲು ಜ್ಯೋತಿಷಿ ಅವತಾರದಲ್ಲಿ ಕಿಚ್ಚ ಬರುತ್ತಿದ್ದಾರೆ.
ಹೌದು ಖಾವಿ ತೊಟ್ಟು ಬಿಗ್ ಬಾಸ್ ಮನೆ ಶುಭಾರಂಭ ಮಾಡಲು ಸೂಕ್ತ ಯಾವುದು ಹೇಳಲು ಹೊರಟ್ಟಿದ್ದಾರೆ.
ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್ನಲ್ಲಿ ಹೇಳಿ.#BBK8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ @KicchaSudeep pic.twitter.com/ra15Kozih0
— Colors Kannada (@ColorsKannada) February 12, 2021
ಇನ್ನು ಸುದೀಪ್ ಅವರ ಈ ಹೊಸ ಅವತಾರದ ಪೋಟೋ ವನ್ನು ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದು, ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್ನಲ್ಲಿ ಹೇಳಿ ಎಂದು ಬರೆದಿದ್ದಾರೆ.
ಈ ಮೂಲಕ ಕನ್ನಡದ ಬಿಗ್ ಬಾಸ್ ಸೀಸನ್-8 ಶುರುವಿನ ಬಗ್ಗೆ ಸುಳಿವು ನೀಡಿದ್ದು, ಅಭಿನಯ ಚಕ್ರವರ್ತಿ ಪ್ರತಿದಿನ ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಕಾದು ಕುಳಿತಿದ್ದಾರೆ.