ಪ್ರಮುಖ ರಾಜ್ಯ

ಧಾರವಾಡ- ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದ್ದ ರೈಲು ಸೇವೆ ಸ್ಥಗಿತ

ಧಾರವಾಡ: ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರೈಲಿನ ಮೂಲಕ ಸಂಚಾರ ನಡೆಸುವ ಜನರು ಟಿಕೆಟ್ ತೋರಿಸಿ ರೈಲು ನಿಲ್ದಾಣಕ್ಕೆ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.

ಆದರೆ ನೈಋತ್ಯ ರೈಲ್ವೆ ಪ್ರಯಾಣಿಕರ ಕೊರತೆಯ ಕಾರಣ ಮೇ 4ರಿಂದ ಮುಂದಿನ ಆದೇಶದ ತನಕ ಧಾರವಾಡ- ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದ್ದ ರೈಲು ಸೇವೆಯನ್ನು ಸ್ಥಗಿತಗೊಳಿಸಿದ್ದು, ಇದರಿಂದಾಗಿ ರಾಜಧಾನಿಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ತೊಂದರೆಯಾಗಲಿದೆ.

ಕೆ.ಎಸ್.ಆರ್. ಬೆಂಗಳೂರು-ಧಾರವಾಡ- ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆಯನ್ನು ಬೆಂಗಳೂರಿನಿಂದ ಮೇ 4 ಮತ್ತು ಧಾರವಾಡದಿಂದ ಮೇ 5 ರಿಂದ ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 07313 ವಾಸ್ಕೋ ಡ ಗಾಮಾ-ದಾನಾಪುರ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಮೇ.6ರಂದು ಒಂದು ಟ್ರಿಪ್ ಮಾತ್ರ ಓಡಿಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಆಕ್ಸಿಜನ್ ಪೂರೈಕೆ ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ರೈಲಿನ ಮೂಲಕ ಆಕ್ಸಿಜನ್ ಸಾಗಾಣೆ ಮಾಡುತ್ತಿದ್ದು, ಕರ್ನಾಟಕದಲ್ಲಿ ಸಹ ಆಕ್ಸಿಜನ್ ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ ಸರ್ಕಾರದ ಮನವಿಯಂತೆ 24 ಗಂಟೆಗಳಲ್ಲಿ ವೈಟ್ ಫೀಲ್ಡ್ ಗೂಡ್ಸ್ ಟರ್ಮಿನಲ್ ನಲ್ಲಿ ಲಾರಿಯನ್ನು ಏರಿಸಿ/ ಇಳಿಸಲು ಸಹಾಯಕವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ರೋ-ರೋ ಸೇವೆ ಮೂಲಕ ಆಕ್ಸಿಜನ್ ಸಾಗಾಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Related posts

ಶೀಘ್ರವೇ ಜಾಗತಿಕ ಮಾರುಕಟ್ಟೆಗೆ ಯುಪಿಐ: ಎನ್‌ಸಿಪಿಐನಿಂದ ಹೊಸ ಸಂಸ್ಥೆಯ ಸ್ಥಾಪನೆ

Upayuktha

ಬೆಂಗಳೂರು ಇಸ್ಕಾನ್ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ನ.30ರ ತನಕ ದೀಪೋತ್ಸವ

Upayuktha News Network

ಶಿವಸೇನೆ-ಎನ್‌ಸಿಪಿ ಕಾಂಗ್ರೆಸ್‌ನದ್ದು ಸಮಯಸಾಧಕ ಮೈತ್ರಿ: ನಿತಿನ್ ಗಡ್ಕರಿ

Upayuktha