ಬೆಳಾಲು: ಬೆಳಾಲು ಗ್ರಾಮದ ಎಂಗಾಜೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ 50.ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಶಾಸಕ ಹರೀಶ್ ಪೂಂಜರವರು ಏ.6ರಂದು ಶಿಲಾನ್ಯಾಸ ನೇರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ ಬನಂದೂರು, ಬೆಳಾಲು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಗ್ರಾ.ಪಂ. ಸದಸ್ಯರುಗಳಾದ ಸುರೇಂದ್ರ ಗೌಡ, ಕೃಷ್ಣಯ್ಯ ಆಚಾರ್ಯ, ವಿದ್ಯಾ ಶ್ರೀನಿವಾಸ, ಸ್ಥಳೀಯರಾದ ಮಾಧವ ಗೌಡ, ಪೆರಣ ಗೌಡ, ದಾಮೋದರ ಕಾಡಂಡ, ಹರೀಶ ಅದವೂರು ಮೊದಲಾದವರು ಉಪಸ್ಥಿತರಿದ್ದರು.