ಗ್ರಾಮಾಂತರ ಪ್ರಮುಖ ಸ್ಥಳೀಯ

ಬೆಳಾಲು: ಶ್ರೀ ಅನಂತ ಪದ್ಮನಾಭ ದೇವಸ್ಥಾನ ಮತ್ತು ಶ್ರೀ ಅನಂತೇಶ್ವರ ಭಜನಾ ಮಂಡಳಿ ವತಿಯಿಂದ ಸಂಸ್ಕಾರ ಶಿಬಿರ

ಬೆಳಾಲು: ಇಲ್ಲಿಯ ಅನಂತ್ತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಮತ್ತು ಶ್ರೀ ಅನಂತೇಶ್ವರ ಭಜನಾ ಮಂಡಳಿ ಅನಂತ್ತೋಡಿ ಆಶ್ರಯದಲ್ಲಿ ಮುಂದಿನ 10 ವಾರಗಳು  ಸಂಸ್ಕಾರ ಶಿಬಿರ ನಡೆಯಲಿದ್ದು, ಇದರ ಉದ್ಘಾಟನೆ ಕಾರ್ಯ  .18 ರಂದು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ ಜರಗಿತು.

ದೇವಸ್ಥಾನದ ಅಡಳಿತ ಮೋಕ್ತೇಸರ ಬೆಳಾಲು ಗುತ್ತು ಜೀವಂಧರ ಕುಮಾರ್ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ವಹಿಸಿ ಮಾತನಾಡುತ್ತಾ ಹಿರಿಯರ ಮಾರ್ಗದರ್ಶನದಂತೆ ಕಟ್ಟಿ ಬೆಳೆಸಿದ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಇಂದಿನ ಮಕ್ಕಳಿಗೆ ಇಂತಹ ಶಿಬಿರಗಳು ಸಹಕಾರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ತಾ.ಪಂ ಮಾಜಿ ಅಧ್ಯಕ್ಷ ಎನ್. ಜತ್ತನ ಗೌಡ ಮಾತನಡುತ್ತಾ ಮಕ್ಕಳಿಗೆ ಎಳವೆಯಲ್ಲಿಯೇ ವಿದ್ಯಾಭ್ಯಾಸದ ಜೊತೆಗೆ ಇಂತಹ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಬೇಕು. ಪರಿಣಾಮ ಭವಿಷ್ಯತ್ ಅಲ್ಲಿ ಉತ್ತಮ ಶಿಕ್ಷಣ, ಆರೋಗ್ಯ, ಸಂಸ್ಕಾರದ ಜೀವನಕ್ಕೆ ನಾಂದಿಯಗುತ್ತದೆ ಎಂದರು. ಇನ್ನೊರ್ವ ಮುಖ್ಯ ಅತಿಥಿ ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ತಾಲೂಕು ವಿಶ್ವಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಬನಂದೂರು ಮಾತನಾಡುತ್ತಾ ಬೆಳಾಲಿನಲ್ಲಿ ಪ್ರಾರಂಭಗೊಂಡಂತಹ ಈ ಶಿಬಿರ ತಾಲೂಕಿನಾದ್ಯಂತ ನಡೆಸಲು ಪ್ರೇರಣೆಯಾಗಿ ಮಕ್ಕಳ ಶಾರೀಕ ಬೌಧಿಕ ಶಿಕ್ಷಣಕ್ಕೆ ಪೂರಕವಾಗಲಿದೆ ಎಂದರು.

ಬೆಳಾಲು ಶ್ರೀ ಧ.ಮ. ಪ್ರೌಢ ಶಾಲಾ ಮುಖ್ಯೋಪಾದ್ಯಾಯ ರಾಮಕೃಷ್ಣ ಭಟ್ ಪ್ರಸ್ತಾವಿಕವಾಗಿ ಮಾತನಾಡಿ ಶಿಬಿರದ ನಿಯಮವನ್ನು ವಿವರಿಸಿದರು.

ಬೆಳಾಲು ಗ್ರಾ.ಪಂ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಜಾರಪ್ಪ ಗೌಡ ಅರಣೆಮಾರು, ಗ್ರಾ.ಪಂ ಸದಸ್ಯೆ ವಿದ್ಯಾ ಶ್ರೀನಿವಾಸ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಾಲು ಒಕ್ಕೂಟದ ಅಧ್ಯಕ್ಷ ಸಂಜೀವ ಗೌಡ, ನಿವೃತ್ತ ಗ್ರಂಥಪಾಲಕ ಜಿ.ಕೆ ಕಂಬಾರ್, ಶಿಕ್ಷಕ ಕರಿಣ್ಣ ಗೌಡ ಬೇರಿಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಯಶೋಧ ಸೀತಾರಾಮ, ಜನಾರ್ದನ ಪೂಜಾರಿ ಪೆಲತ್ತಾಡಿ, ಬೆಳಾಲು ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಗೌಡ, ಭಜನಾ ಮಂಡಳಿಯ ಕಾರ್ಯದರ್ಶಿ ಸೀತಾರಾಮ ಬಿ.ಎಸ್, ಉಮೇಶ್ ಜಿ.ಎಂ ಮಂಜೊತ್ತು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಬೆಳಿಯಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಹಾಗೂ ಜಾತ್ರೋತ್ಸವ ಮಹಿಳಾ ಸಮಿತಿ ಸದಸ್ಯೆ ಹೇಮಲತಾ ಗಣಪಣಗುತ್ತು ವಂದಿಸಿದರು.

Related posts

ರೈಲ್ವೇ ಪ್ರಯಾಣ ದರ ಇಂದಿನಿಂದ ಕಿ.ಮೀಗೆ 1ರಿಂದ 4 ಪೈಸೆ ಏರಿಕೆ

Upayuktha

60ನೇ ಜನ್ಮದಿನಕ್ಕೆ ಗೋಶಾಲೆಗೆ 60,000 ರೂ ದೇಣಿಗೆ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ

Upayuktha

ಆಳ್ವಾಸ್‍ನಲ್ಲಿ “ಡೇಟಾ ಅನಾಲಿಟಿಕ್ಸ್ ಅಂಡ್ ಮಷಿನ್ ಲರ್ನಿಂಗ್” ಕಾರ್ಯಾಗಾರ

Upayuktha