ಗ್ರಾಮಾಂತರ ಪ್ರಮುಖ ಸ್ಥಳೀಯ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ದ.ಕ ಜಿಲ್ಲಾ ಯುವ ವೇದಿಕೆಯ ಸದಸ್ಯರ ಆಯ್ಕೆ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ದ.ಕ ಜಿಲ್ಲಾ ಯುವ ವೇದಿಕೆಯ ಉಪಾಧ್ಯಕ್ಷರಾಗಿ ಯಶವಂತ ಗೌಡ ಬೆಳಾಲು, ಕಾರ್ಯದರ್ಶಿಯಾಗಿ ಗಣೇಶ ಗೌಡ ಕಲಾಯಿ ಪಟ್ರಮೆ ಆಯ್ಕೆಯಾಗಿದ್ದಾರೆ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ಭಾರತಿ ಧರ್ಣಪ್ಪ ಗೌಡ ಕೊಂದೋಡಿ ಕಡಿರುದ್ಯಾವರ ಆಯ್ಕೆಯಾಗಿದ್ದಾರೆ.

ಬೆಳಾಲಿನ ಯಶವಂತ ಗೌಡರವರು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ಯುವ ವೇದಿಕೆಯ ಅಧ್ಯಕ್ಷರಾಗಿದ್ದು ಇದೀಗ ದ.ಕ ಜಿಲ್ಲಾ ಯುವ ವೇದಿಕೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಮೂಲತಃ ಪಟ್ರಮೆಯ ಕಲಾಯಿಯವರಾದ ಗಣೇಶ್ ಗೌಡರವರು ಮಂಗಳೂರು ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಇವರು ಇದೀಗ ದ.ಕ ಜಿಲ್ಲಾ ಯುವ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕಡಿರುದ್ಯಾವರ ಕೊಂದೋಡಿಯ ಭಾರತಿ ಧರ್ಣಪ್ಪ ಗೌಡರವರು, ಕಡಿರುದ್ಯಾವರ ಮಹಿಳಾ ವೇದಿಕೆಯ ಗ್ರಾಮ ಸಮಿತಿಯ ಅಧ್ಯಕ್ಷರಾಗಿದ್ದು, ವಾಣಿ ಪ್ರೌಢ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಮಾಜಿ ಉಪಾಧ್ಯಕ್ಷೆಯಾಗಿ, ತಾಲೂಕು ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆಯಾಗಿದ್ದ ಇವರು ಇದೀಗ ದ.ಕ ಜಿಲ್ಲಾ ಮಹಿಳಾ ವೇದಿಕೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

Related posts

ಇಂದು (ಮಾ.4) ರಾಷ್ಟ್ರೀಯ ಸುರಕ್ಷತಾ ದಿನ: ಮಹತ್ವ ಮತ್ತು ಪ್ರಾಮುಖ್ಯತೆ

Upayuktha

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನಲ್ಲಿ 3000ಕ್ಕೂ ಅಧಿಕ ಕುತೂಹಲಿಗಳಿಂದ ಕಂಕಣ ಸೂರ್ಯಗ್ರಹಣ ವೀಕ್ಷಣೆ

Upayuktha

ಯುವ ಮದ್ದಳೆಗಾರ ವಿನಯ ಆಚಾರ್ಯ ಅನಾರೋಗ್ಯದಿಂದ ನಿಧನ

Upayuktha