ಗ್ರಾಮಾಂತರ ಪ್ರಮುಖ ಸ್ಥಳೀಯ

ಬೆಳ್ತಂಗಡಿ: ಪಡುಮಲೆ ಕೋಟಿ ಚೆನ್ನಯ ಸಾನಿಧ್ಯದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಏ.22 ರಿಂದ 24ರವರೆಗೆ ನಡೆಯಲಿರುವ ನಮ್ಮ ಪಡುಮಲೆ ನಾಗಬೆರ್ಮೆರೆ ಗುಡಿ, ನಾಗಸನ್ನಿಧಿ, ರಕ್ತೇಶ್ವರಿ, ತೀರ್ಥಭಾವಿ ಹಾಗೂ ದೇಯಿ ಬೈದೆತಿ ಸಾನಿಧ್ಯದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಎ.5 ರಂದು ಬೆಳ್ತಂಗಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಿತು.

ಮಾಜಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಎನ್ ಪದ್ಮನಾಭ ಮಾಣಿಂಜ, ಗಂಗಾಧರ ಮಿತ್ತಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಉಮೇಶ್ ಎ.ಬಿ ನಾವೂರು, ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಅನಿಲ್ ಕುಮಾರ್, ತಾಲೂಕು ಯುವವಾಹಿನಿ ಅಧ್ಯಕ್ಷ ಎಂ.ಕೆ ಪ್ರಸಾದ್, ಶೈಲೇಶ್ ಕುಮಾರ್, ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿಯ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

 

Related posts

ಪದವಿ-ಪದಕ ಪಡೆಯುವುದೇ ವಿದ್ಯಾರ್ಜನೆಯ ಉದ್ದೇಶವಲ್ಲ: ಡಾ. ಪದ್ಮನಾಭ ಆಚಾರ್ಯ

Upayuktha

ಸುಳ್ಯ: “ಯಕ್ಷಗಾನದ ಒಳಾಂಗಣದಲ್ಲಿ” ಕೃತಿ ಬಿಡುಗಡೆ

Upayuktha News Network

ಬಂಧಿತ ಚಿದಂಬರಂ ಇಂದು ಕೋರ್ಟಿಗೆ ಹಾಜರು

Upayuktha