ಗ್ರಾಮಾಂತರ ನಗರ ಪ್ರಮುಖ ಸ್ಥಳೀಯ

ಮಾ.11: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ

ಬಳಂಜ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇದರ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ 166ನೇ ವರ್ಷದ ಗುರುಜಯಂತಿ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಮಾರ್ಚ್.10 ಮತ್ತು 11ರಂದು ಬಳಂಜ ಸಂಘದ ವಠಾರದಲ್ಲಿ ನಡೆಯಲಿದೆ.

ಈ ಕುರಿತು ಮಾ.2ರಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ (ರಿ.) ಬಳಂಜ ಇದರ ಅಧ್ಯಕ್ಷ ಪ್ರವೀಣ್ ಪತ್ರಿಕಾಗೋಷ್ಠಿ ನಡೆಸಿದ್ದು, ಕಾರ್ಯಕ್ರಮ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು 1ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಸಾಗುತ್ತಿದ್ದು, ಮಾ.10 ಹಾಗೂ 11ರಂದು ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗೊಳೊಂದಿಗೆ ವಿಜೃಂಭಣೆಯಿಂದ ನೂತನ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ.

ಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಶ್ರೀ ಸಂತೋಷ್ ಪಿ. ಕೋಟ್ಯಾನ್, ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಮನೋಹರ ಬಳಂಜ, ಸಾಂಸ್ಕೃತಿಕ ಮತ್ತು ಕಾರ್ಯಕ್ರಮ ನಿರ್ವಹಣಾ ಸಮಿತಿ ಸಂಚಾಲಕ ಶ್ರೀ ಚಂದ್ರಹಾಸ ಬಳಂಜ, ಬೆಳಕು ಮತ್ತು ಧ್ವನಿವರ್ಧಕ ಸಮಿತಿ ಸಂಚಾಲಕ ಶ್ರೀ ದಿನೇಶ್ ಪೂಜಾರಿ ಅಂತರ, ಸಾಂಸ್ಕೃತಿಕ ಕಾರ್ಯಕ್ರಮದ ಸಹಸಂಚಾಲಕ ಶ್ರೀ ಜಗದೀಶ್ ಪರಾರಿ ಉಪಸ್ಥಿತರಿದ್ದರು.

Related posts

ಸ್ವಚ್ಛತೆಯಿಂದಲೇ ಆರೋಗ್ಯ ವೃದ್ಧಿ: ಡಾ|| ಚೂಂತಾರು

Upayuktha

ಬೆಳ್ತಂಗಡಿ: ಯು.ಟಿ.ಐ ಮ್ಯೂಚುವಲ್ ಫಂಡ್ ನ ಸಲಹಾ ಕೇಂದ್ರ ಕಾರ್ಯಾರಂಭ

Sushmitha Jain