ಕೃಷಿ ಗ್ರಾಮಾಂತರ ಪ್ರಮುಖ ಸಮುದಾಯ ಸುದ್ದಿ ಸ್ಥಳೀಯ

ಮುಂದಿನ 15 ದಿನಗಳ ಒಳಗೆ ಬೆಳೆ ವಿಮೆ ಹಣ ಜಮೆಯಾಗದಿದ್ದರೆ ತಾಲೂಕು ಕಚೇರಿ ಎದುರು ಧರಣೆ ಕೂರುತ್ತೇವೆ: ಗಜಾನನ ವಝೆ

ಬೆಳ್ತಂಗಡಿ: ತಾಲೂಕಿನ ಕೆಲ ರೈತರಿಗೆ ಹವಾಮಾನ ಆಧಾರಿತ ಯೋಜನೆ ಅಡಿಯಲ್ಲಿ ನೀಡುವ ಬೆಳೆ ವಿಮೆ ಜಮೆ ಆಗದೇ ಬಾಕಿ ಉಳಿದಿದ್ದು, ಅದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಒದಗಿಸಿ ಕೊಡಬೇಕೆಂದು ನಿವೃತ್ತ ಸೈನಿಕ ಹಾಗೂ ಕೃಷಿಕ ಗಜಾನನ ವಝೆ ಆಗ್ರಹಿಸಿದರು.

ಈ ಕುರಿತು ಮಾ.2ರಂದು ಬೆಳ್ತಂಗಡಿ ಪ್ರವಾಸಿ ಮಂದಿರಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದರು. ಈ ವೇಳೆ  ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ 2018-19 ಹಾಗೂ 2019-20 ಎರಡು ವರ್ಷ ಕೂಡ ಸ್ಥಳೀಯ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಅಡಿಕೆ ಬೆಳೆಗೆ ವಿಮೆ ಮಾಡಿಸಿದ್ದು, ನೆರೆ ಹಾಗೂ ಕೊಳೆರೋಗದಿಂದ ತೊಂದರೆಯಾಗಿ ಅಪಾರ ನಷ್ಟವಾಗಿದೆ.

ಆದರೆ ತಾಂತ್ರಿಕ ದೋಷದಿಂದ ಇನ್ನು ಪರಿಹಾರ ಧನ ಜಮೆಯಾಗದೇ ರೈತರು ಸಂಕಷ್ಟಕ್ಕೆ ಹೀಡಾಗಿದ್ದು, ವಿಮೆ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಕುರಿತು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದರು. ಒಂದು ವೇಳೆ ಮುಂದಿನ 15 ದಿನಗಳ ಒಳಗೆ ವಿಮೆ ಹಣ ಜಮೆಯಾಗದಿದ್ದರೆ ತಾಲೂಕು ಕಚೇರಿ ಎದುರು ಧರಣೆ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಜಿತ ವಝೆ ಉಪಸ್ಥಿತರಿದ್ದರು.

Related posts

ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಘಟಕಾಧಿಕಾರಿಗಳ ಸಭೆ

Upayuktha

ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

Upayuktha

ಮೈಸೂರು ದಸರಾ ವೈಭವ: ಚಿತ್ರಗಳಲ್ಲಿ ನೋಡಿ…

Upayuktha