ಆರೋಗ್ಯ ಪ್ರಮುಖ ರಾಜ್ಯ

ರಾಜ್ಯಾದ್ಯಂತ ಹೊಸದಾಗಿ 44,631 ಹೊಸ ಕೊರೋನಾ ಪ್ರಕರಣಗಳು ದಾಖಲು

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಜನತಾ ಕರ್ಪ್ಯೂ ಜಾರಿ ಮಾಡಿ ಒಂದು ವಾರವಾಗಿದ್ದರೂ ಸಹ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದೇ ಹೆಚ್ಚುತ್ತಿವೆ.

ಇಂದು ರಾಜ್ಯಾದ್ಯಂತ ಹೊಸದಾಗಿ 44,631 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರು ನಗರದಲ್ಲಿಯೇ 20,870 ಪ್ರಕರಣಗಳು ದಾಖಲಾಗಿವೆ.

ಇಂದು  24,714 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟಾರೆಯಾಗಿ 4,64,363 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ರಾಜ್ಯಾದ್ಯಂತ 292 ಮರಣ ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳುರು ನಗರದಲ್ಲಿ ಮಾತ್ರ 132 ಮರಣ ಪ್ರಕರಣಗಳು ವರದಿಯಾಗಿವೆ.

ಒಟ್ಟಾರೆಯಾಗಿ ಇಲ್ಲಿಯವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 16,538 ಕ್ಕೆ ಏರಿಕೆಯಾಗಿದೆ.

Related posts

ಬೆಳ್ತಂಗಡಿ: ತಾಲೂಕಿನಲ್ಲಿ ವಾರಾಂತ್ಯದ ಬಿಗು ಕರ್ಫ್ಯೂ ಪೂರ್ಣ ಯಶ್ವಸಿ

Sushmitha Jain

ಚಾಮರಾಜನಗರ; ಗ್ರಾಮಸ್ಥನನ್ನು ಕೊಂದ ಕಾಡಾನೆ

Harshitha Harish

ಯೆಸ್ ಬ್ಯಾಂಕ್‌ ಆಡಳಿತ ಮಂಡಳಿ ಬರ್ಖಾಸ್ತು; ಠೇವಣಿ ಹಿಂಪಡೆತ 50,000 ರೂ.ಗೆ ಮಿತಿಗೊಳಿಸಿದ ಆರ್‌ಬಿಐ

Upayuktha