ಚಂದನವನ- ಸ್ಯಾಂಡಲ್‌ವುಡ್ ಚಿತ್ರ ಸುದ್ದಿ ಸಿನಿಮಾ-ಮನರಂಜನೆ

ರಾಬರ್ಟ್ ಸಿನಿಮಾ ತಂಡದ ವಿರುದ್ಧ ಕೇಳಿ ಬಂತು ಆರೋಪ: ಕೋವಿಡ್ ನಿಯಮ ಉಲ್ಲಂಘಿಸಿ ಆಡಿಯೋ ಲಾಂಚ್

ಹುಬ್ಬಳ್ಳಿ : ಎಲ್ಲೆಡೆ ರಾಬರ್ಟ್ ಸಿನೆಮಾದ ಗುಂಗು ಮನೆ ಮಾಡಿದ್ದು, ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಚಿತ್ರದ ಪ್ರಮೋಷನ್ ಚಟುವಟಿಕೆಗಳು ಭರದಿಂದ ನಡೆಯುತ್ತಿದೆ.

ಇದೀಗ ನಗರದ ರೈಲ್ವೆ ಮೈದಾನದಲ್ಲಿ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ನಡೆದಿದ್ದು, ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಹಾಗೂ ಸಾಮಾಜಿಕ ಅಂತರ ಉಲ್ಲಂಘನೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕೋವಿಡ್ ಕಾರಣದಿಂದ ದೊಡ್ಡ ಸಭೆ ಸಮಾರಂಭಗಳನ್ನು ಜಿಲ್ಲಾಡಳಿತ ರದ್ದು ಮಾಡುತ್ತದೆ. ಸಾಂಪ್ರದಾಯಿಕವಾಗಿ ಕೋವಿಡ್ ನಿಯಮ‌ಪಾಲಿಸಿ ಜಾತ್ರೆ ಸಭೆ ಸಮಾರಂಭ ಆಯೋಜನೆಗೆ ಅನುಮತಿ ನೀಡಲಾಗುತ್ತದೆ.

ಆದರೆ, ರಾಬರ್ಟ್ ಚಿತ್ರದ ಆಡಿಯೋ ಲಾಂಚ್ ವೇಳೆ ಕೋವಿಡ್ ನಿಯಮಗಳನ್ನ ಆಯೋಜಕರು ಪಾಲಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಈ ಕಾರ್ಯಕ್ರಮದಲ್ಲಿ ಸುಮಾರು 40-50 ಸಾವಿರ ಜನ ಸೇರಿದ್ದರು, ಕೋವಿಡ್ ನಿಯಮ ಸಹ ಪಾಲನೆ ಆಗಿಲ್ಲ. ಹೀಗಿದ್ದರೂ ಕೂಡಾ ಯಾರ ಮೇಲೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದ್ದು, ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನವ್ಯಕ್ತವಾಗಿದೆ.

Related posts

ಚಿತ್ರ ಸುದ್ದಿ: ವಿದುಷಿ ಯೋಗೇಶ್ವರಿ ಜಯಪ್ರಕಾಶ್ ಶಿಷ್ಯೆಯರಿಂದ ಭರತನಾಟ್ಯ

Upayuktha

ಮಾಲಿವುಡ್ ನತ್ತ ಶಾನ್ವಿ ಪಯಣ: ‘ ಮಹಾವೀರ್ಯಾರ್​​​’ ನಾಯಕಿಯಾಗಿ ಮಾಸ್ಟರ್ ಹುಡುಗಿ

Sushmitha Jain

ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಹುಟ್ಟು ಹಬ್ಬದ ಸಂಭ್ರಮ

Harshitha Harish