ಅಪಘಾತ- ದುರಂತ ದೇಶ-ವಿದೇಶ

ಕಟ್ಟಡ ಕುಸಿತ 10 ಸಾವು; ಹಲವರಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿ ಮೂರು ಮಹಡಿ ಕಟ್ಟದ ಕುಸಿದುಬಿದ್ದು 10 ಮಂದಿ ಮೃತಪಟ್ಟಿದ್ದು.

ಹಲವರು ಗಾಯಗೊಂಡಿದ್ದಾರೆ. 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


ಮುಂಜಾನೆ 3.40ರ ವೇಳೆಗೆ ಕಟ್ಟಡ ಕುಸಿದುಬಿದ್ದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲಾಗುತ್ತಿದೆ.

ಮಗುವೊಂದನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಸುಮಾರು 20 ಜನರನ್ನು ಈಗಾಗಲೇ ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದೆ.

Related posts

ಎಲ್‌ಎಲ್‌ಬಿಗೆ ಗರಿಷ್ಠ ವಯೋಮಿತಿ: ಬಿಸಿಐ ನಿಯಮ ಪ್ರಶ್ನಿಸಿ ಸುಪ್ರೀಂ ಮೊರೆ ಹೊಕ್ಕ 77ರ ವೃದ್ಧೆ

Harshitha Harish

ವಿದ್ಯುತ್ ಗ್ರಿಡ್ ಕುಸಿತ ಕುರಿತ ಸಂದೇಶಗಳು ಸುಳ್ಳು: ಕೇಂದ್ರ ಸರಕಾರ ಸ್ಪಷ್ಟನೆ

Upayuktha

ಚೀನಾಗೆ 13,000 ಕೋಟಿ ಪೌಂಡ್‌ಗಳ ‘ಕೊರೊನಾ ಬಿಲ್’ ಕಳುಹಿಸಿದ ಜರ್ಮನಿ

Upayuktha

Leave a Comment