ನಗರ ಭಾಷಾ ವೈವಿಧ್ಯ ಸ್ಥಳೀಯ

ಮಂಗಳೂರು: ಜರ್ಮನ್ ಭಾಷಾ ಪರೀಕ್ಷೆಯಲ್ಲಿ 100 % ಫಲಿತಾಂಶ

ಮಂಗಳೂರು: ಇಂದು ಪ್ರಕಟವಾದ A1 ಮತ್ತು A2 ಜರ್ಮನ್ ಭಾಷಾ ಪರೀಕ್ಷೆಯ ಫಲಿತಾಂಶದಲ್ಲಿ ಮಂಗಳೂರಿನ ಎಡ್ವಿಯೊ ಲ್ಯಾಂಗ್ವೇಜ್ ಇನ್ಸ್ಟಿಟ್ಯೂಟ್‌‌ನ ಎಲ್ಲ 8 ವಿದ್ಯಾರ್ಥಿಗಳು ಉತ್ತಮ ಅಂಕಗಳೊಡನೆ ಉತ್ತೀರ್ಣರಾಗಿದ್ದಾರೆ.

ಬೆಂಗಳೂರಿನ ಗ್ಯೋಠೆ ಇನ್ಸ್ಟಿಟ್ಯೂಟ್‌‌ (ಮ್ಯಾಕ್ಸ್‌ ಮ್ಯುಲ್ಲರ್ ಭವನ್, ಬೆಂಗಳೂರು) ಈ ಪ್ರತಿಷ್ಠಿತ ಪರೀಕ್ಷೆಗಳನ್ನು ಫೆ. 22 ಮತ್ತು 23ರಂದು ನಡೆಸಿತ್ತು.

ನಗರದಲ್ಲಿ MMBS ಕಲಿಯತ್ತಿರುವ ರೋಷ್ ಅಬ್ರಹಾಮ್ ಅವರು A2 ಪರೀಕ್ಷೆಯಲ್ಲಿ 100ಕ್ಕೆ 91 ಅಂಕ ಪಡೆದಿದ್ದಾರೆ.

ಜರ್ಮನಿಯ ವಿಶ್ವವಿಖ್ಯಾತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಜರ್ಮನಿಯ ಬಹುತೇಕ ಸಾರ್ವಜನಿಕ ವಿವಿಗಳಲ್ಲಿ ಬೋಧನಾ ಶುಲ್ಕ ಇಲ್ಲದಿರುವದರಿಂದ ಇತ್ತೀಚೆಗೆ ವಿದ್ಯಾರ್ಥಿಗಳು ಜರ್ಮನಿಯತ್ತ ಮುಖಮಾಡಿದ್ದಾರೆ. ಅಲ್ಲಿ ವ್ಯಾಸಂಗ ಮಾಡಲು ಜರ್ಮನ್ ಭಾಷಾಜ್ಞಾನ ಬೇಕು.

ಎಡ್ವಿಯೊ ಲ್ಯಾಂಗ್ವೇಜ್ ಇನ್ಸ್ಟಿಟ್ಯೂಟ್‌ ಆರಂಭಿಕ ಮಟ್ಟದ A1, A2 ಅಲ್ಲದೆ ಭಾಷಾ ಪರಿಣತಿ ಪಡೆಯಬೇಕು ಎನ್ನುವವರಿಗೆ B1, B2 ಮಟ್ಟದ ತರಗತಿಗಳನ್ನೂ ಮಂಗಳೂರಿನಲ್ಲಿ ನಡೆಸುತ್ತದೆ. ಸಂಸ್ಥೆಯಲ್ಲಿ ಕಲಿತ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗ ಅಥವಾ ವಿಭಿನ್ನ ಕೆಲಸಗಳಲ್ಲಿ ತೊಡಗಿದ್ದಾರೆ.

– ಗೋವಿಂದ್ ಬೆಳಗಾಂವ್ಕರ್‍
ಮುಖ್ಯ ಭಾಷಾ ತರಬೇತುದಾರರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ: ಜಗದೀಶ್ ಹಿರೇಮಣಿ

Upayuktha

ಸಮಾಜಸೇವಕಿ ತಬಸ್ಸುಮ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ ವರ್ಷದ ಪ್ರಶಸ್ತಿ

Upayuktha

ಆಳ್ವಾಸ್‌ ಕಾಲೇಜಿನಲ್ಲಿ ‘ಯಶಸ್ಸಿಗಾಗಿ ಕೌಶಲ್ಯ’ ಕಾರ್ಯಾಗಾರ

Upayuktha