ದೇಶ-ವಿದೇಶ ಪ್ರಮುಖ

ಕಾಶ್ಮೀರದಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ 13 ಉಗ್ರರ ವಧೆ; ಉಗ್ರರ ಲಾಂಚ್‌ ಪ್ಯಾಡ್ ಧ್ವಂಸ

(ಸಾಂದರ್ಭಿಕ ಚಿತ್ರ: ಕೃಪೆ- ರಿಪಬ್ಲಿಕ್ ಟಿವಿ)

ಹೊಸದಿಲ್ಲಿ:

ಕಾಶ್ಮೀರ ನಿಯಂತ್ರಣ ರೇಖೆಯಾಚೆಯಿಂದ ಒಳ ನುಸುಳಲು ಯತ್ನಿಸಿದ 13 ಪಾಕ್‌ ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಅಲ್ಲದೆ ಪಾಕಿಸ್ತಾನದ ಉಗ್ರರ ಲಾಂಚಿಂಗ್ ಪ್ಯಾಡ್ ಅನ್ನು ಧ್ವಂಸಗೊಳಿಸಿದೆ.

ಪೂಂಛ್ ಜಿಲ್ಲೆಯ ಮೆಂಧಾರ್ ಸೆಕ್ಟರ್‌ನ ಎಲ್‌ಓಸಿ ಬಳಿ ಈ ಘಟನೆ ನಡೆದಿದೆ. ಉಗ್ರರನ್ನು ಒಳ ನುಸುಳಿಸಲು ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದಾಗ ಭಾರತೀಯ ಸೇನಾಪಡೆ ತೀಕ್ಷ್ಣ ಪ್ರತಿದಾಳಿ ನಡೆಸಿದೆ. ಈ ಘರ್ಷಣೆಯಲ್ಲಿ ಪಾಕ್‌ ಉಗ್ರರ ನೆಲೆಯೊಂದು ಧ್ವಂಸವಾಗಿದೆ. ಅಲ್ಲಿ ಗಡಿ ನುಸುಳಲು ಕಾಯುತ್ತಿದ್ದ 10-15 ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

10ರಿಂದ 15 ಉಗ್ರರು ಗಡಿಯೊಳಕ್ಕೆ ನುಸುಳಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬ ಖಚಿತ ವರ್ತಮಾನ ಭಾರತೀಯ ಸೇನೆಗೆ ಲಭಿಸಿತ್ತು. ಅದಕ್ಕೆ ಸರಿಯಾಗಿ ಪಾಕ್‌ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದವು. ಇದನ್ನೇ ಕಾಯುತ್ತಿದ್ದ ಭಾರತೀಯ ಪಡೆಗಳು ಉಗ್ರರ ಲಾಂಚಿಂಗ್ ಪ್ಯಾಡ್‌ ಮೇಲೆ ಮುಗಿಬಿದ್ದು ನಾಶಪಡಿಸಿದವು ಎಂದು ಮೂಲಗಳು ಹೇಳಿವೆ.

ಉಗ್ರರ ಶಿಬಿರಗಳು ನಾಶವಾದ ಕೂಡಲೇ ಕೆಲವು ಶವಗಳನ್ನು ಪಾಕ್ ಸೈನಿಕರು ಸಾಗಿಸುತ್ತಿರುವುದು ಕಂಡುಬಂತು.

ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ನಡೆದ ಮತ್ತೊಂದು ಗುಂಡಿನ ಚಕಮಕಿಯಲ್ಲಿ ಮೂರು ಉಗ್ರರನ್ನು ಕೊಂದು ಹಾಕಲಾಗಿದೆ.

ಕಾಶ್ಮೀರದಲ್ಲಿ ‘ಆಪರೇಶನ್ ಆಲ್‌ ಔಟ್‌’ ಮೂಲಕ ಬಹುತೇಕ ಉಗ್ರರನ್ನು ನಾಶಪಡಿಸಲಾಗಿದೆ. ಅಲ್ಲದೆ ಉಗ್ರರ ವರಿಷ್ಠ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ. ಹೀಗಾಗಿ ಪಾಕ್‌ ಉಗ್ರರು ಗಡಿಯಾಚೆಯಿಂದ ಹೊಸ ಕಮಾಂಡರ್‌ಗಳನ್ನು ಕಾಶ್ಮೀರದೊಳಕ್ಕೆ ನುಗ್ಗಿಸಲು ಹವಣಿಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಪ್ರಧಾನಿ ಮೋದಿ ಅವರ ಮನ್‌ ಕೀ ಬಾತ್‌ 58ನೇ ಕಂತು ದೀಪಾವಳಿಯಂದು ಪ್ರಸಾರ

Upayuktha

ಮಾತಿನ ಮಲ್ಲ ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ

Upayuktha News Network

ಈಶ್ವರ ಚಂದ್ರ ವಿದ್ಯಾಸಾಗರ್‌ ಅವರ ಜನ್ಮದಿನ; ಉಪರಾಷ್ಟ್ರಪತಿ ನಮನ

Harshitha Harish