ಅಪರಾಧ ಚಂದನವನ- ಸ್ಯಾಂಡಲ್‌ವುಡ್

ನಟಿ ಸಂಜನಾ, ರಾಗಿಣಿ ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಈಗಾಗಲೇ ಡ್ರಗ್ಸ್ ವಿಚಾರದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಷ್ಟು ದಿನಗಳ ಕಾಲ ಸಿಸಿಬಿ ಪೊಲೀಸರ ವಶದಲ್ಲಿದ್ದ ಈ ನಟಿಯರು ಇಂದು ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ಬೆಂಗಳೂರಿನ ಡ್ರಗ್ಸ್ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟಿಯರನ್ನು ಬಂಧನ ಮಾಡಿದ್ದಾರೆ. ಸಿಸಿಬಿ ವಶದಲ್ಲಿದ್ದ ಅವರ ಕಸ್ಟಡಿ ಅವಧಿ ಇಂದಿಗೆ ಅಂದರೆ ಸೋಮವಾರ ಕ್ಕೆ ಮುಕ್ತಾಯಗೊಂಡಿತು.

ಹಾಗೆಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸರು ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಸೆಪ್ಟೆಂಬರ್ 27ರ ತನಕ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು.

ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಸೋಮವಾರ ನಡೆಸಿತ್ತು. ಸೆ. 16ಕ್ಕೆ ಜಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಈ ಕಾರಣದಿಂದಾಗಿ ನಟಿ ರಾಗಿಣಿ ಸಂಜನಾ ಜೈಲು ಸೇರಲಿದ್ದಾರೆ.

Related posts

ಪುಣಚದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ಕ್ರಿಕೆಟ್‌ ಆಡುತ್ತಿದ್ದವರ 5 ಬೈಕ್‌ಗಳ ಜಪ್ತಿ

Upayuktha

ಲಾಕ್‌ಡೌನ್ ಉಲ್ಲಂಘನೆ: ಮಲಪ್ಪುರಂನಿಂದ ಬಂಟ್ವಾಳಕ್ಕೆ ಬಂದವನ ವಿರುದ್ಧ ಕೇಸು ದಾಖಲು

Upayuktha

ಸವಿ ನೆನಪು: ಹಿರಿಯ ನಟ ಅದ್ವಿತೀಯ ಕಲಾವಿದ, ‘ಚಾಮಯ್ಯ ಮೇಷ್ಟ್ರು’ ಕೆಎಸ್ ಅಶ್ವಥ್ ಜನ್ಮದಿನ ಇಂದು

Upayuktha

Leave a Comment

error: Copying Content is Prohibited !!