ಗ್ರಾಮಾಂತರ ಪ್ರಮುಖ ಸ್ಥಳೀಯ

15ನೇ ಹಣಕಾಸು ಆಯೋಗ ನೋಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ಕೆ.ಎ ಹಿದಾಯುತುಲ್ಲಾ ನೇಮಕ

ಬೆಳ್ತಂಗಡಿ: 15ನೇ ಹಣಕಾಸು ಆಯೋಗದ ಅನುದಾನದ ಸಮರ್ಪಕ ಬಳಕೆಗಾಗಿ ನಗರದ ಮಟ್ಟದ ನೋಡೆಲ್ ಅಧಿಕಾರಿಯಾಗಿ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಎ ಹಿದಾಯುತುಲ್ಲಾ ರವರು ನೇಮಕಗೊಂಡಿದ್ದಾರೆ.

15ನೇ ಹಣಕಾಸು ಆಯೋಗದ ವರದಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅನುದಾನ ಕುರಿತಂತೆ ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕಾರ್ಯಕಾರಿ ಮಾರ್ಗಸೂಚಿಗಳನ್ನು ಹೊರತಂದಿದ್ದು, 15ನೇ ಹಣಕಾಸು ಆಯೋಗದ ಅನುದಾನದ ಸಮರ್ಪಕ ಬಳಕೆಗಾಗಿ ಹಾಗೂ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಸಲುವಾಗಿ ರಾಜ್ಯ ಮಟ್ಟದಲ್ಲಿ ಹಾಗೂ ನಗರ ಮಟ್ಟದಲ್ಲಿ ಇಬ್ಬರು ನೋಡಲ್ ಆಫೀಸರ್‌ಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ನಗರ ಅಭಿವೃದ್ಧಿಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎ ಹಿದಾಯುತುಲ್ಲಾ ರವರು ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿಯಾಗಿದ್ದಾರೆ.

Related posts

‘ರೇಡಿಯೋ ನಿಟ್ಟೆ’ ಏ.13ರಿಂದ ಪ್ರಸಾರ ಆರಂಭ

Upayuktha

ಶಾಸಕ ಡಾ.ಭರತ್ ಶೆಟ್ಟಿಯವರಿಂದ ಗುರುಪುರ ವ್ಯಾಪ್ತಿಯಲ್ಲಿ 2 ಕಾಂಕ್ರೀಟ್ ರಸ್ತೆಗಳ ಲೋಕಾರ್ಪಣೆ

Upayuktha

ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಕಾರ್ಡ್‌ಗಳನ್ನು ಹಿಂದಿರುಗಿಸಲು ಮಾ.15 ರವರೆಗೆ ಕಾಲಾವಕಾಶ

Upayuktha