ದೇಶ-ವಿದೇಶ

ಭಯೋತ್ಪಾದಕರು ಸಂಸತ್ ದಾಳಿ ನಡೆಸಿ 19 ವರ್ಷ: ಹುತಾತ್ಮರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

 ನವದೆಹಲಿ: 2001 ರ ಸಂಸತ್ ಭವನದ ಮೇಲಿನ ಭಯೋತ್ಪಾದಕರ ದಾಳಿಗೆ ಇಂದಿಗೆ 19 ವರ್ಷ ತುಂಬಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಹುತಾತ್ಮರಿಗೆ ಗೌರವ ಸಲ್ಲಿಸಿದರು.

ದಾಳಿಯಲ್ಲಿ ಹುತಾತ್ಮರಾದವರಿಗೆ ದೆಹಲಿಯಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ವೆಂಕಯ್ಯ ನಾಯ್ಡು, ಹಲವರು ನಮನ ಸಲ್ಲಿಸಿದ್ದಾರೆ.

ಟ್ವೀಟ್ ಮಾಡಿದ್ದ ಮೋದಿಯವರು, 2001 ರಲ್ಲಿ ಈ ದಿನ ನಮ್ಮ ಸಂಸತ್ತಿನ ಮೇಲೆ ನಡೆದ ಹೇಡಿತನದ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ಸಲುವಾಗಿ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ನೆನೆಯುತ್ತಿದ್ದೇವೆ. ವೀರ ಯೋಧರಿಗೆ ನಾವೆಂದಿಗೂ ಕೃತಜ್ಞರಾಗಿರಬೇಕೆಂದು ಹೇಳಿದ್ದರು.

ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ಹೇಡಿ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಿ ತಮ್ಮ ಪ್ರಾಣ ಅರ್ಪಿಸಿದ ಭಾರತಾಂಬೆಯ ವೀರ ಪುತ್ರರಿಗೆ ಕೋಟಿ ಕೋಟಿ ನಮನಗಳು ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಡಿಸೆಂಬರ್ 13, 2001ರಂದು ರಾಜಧಾನಿ ದೆಹಲಿಯಲ್ಲಿ ಸಂಸತ್ ಮೇಲೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭೀಕರ ದಾಳಿ ನಡೆಸಿದ್ದು, ದಾಳಿಯಲ್ಲಿ ಆರು ಪೊಲೀಸರು ಸೇರಿದಂತೆ ಒಟ್ಟು 79 ಮಂದಿ ಭಯೋತ್ಪಾಕರ ಕೌರ್ಯಕ್ಕೆ ಬಲಿಯಾಗಿ, 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ದಾಳಿ ನಡೆಸಿ ಇಂದಿಗೆ 19 ವರ್ಷಗಳು ಕಳೆದಿವೆ.

Related posts

ಪಾಕ್‌ನಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 1.85 ಲಕ್ಷಕ್ಕೆ ಏರಿಕೆ

Upayuktha

ಮದ್ಯಪಾನ ಸೇವನೆ ಕನಿಷ್ಠ ವಯಸ್ಸಿಗೆ ಇಳಿಸಿ ದೆಹಲಿ ಸರ್ಕಾರ ಆದೇಶ

Harshitha Harish

ಹೌಡಿ, ಮೋದಿ: ಪ್ರಧಾನಿ ಮೋದಿ ರ‍್ಯಾಲಿಯಲ್ಲಿ ಅಧ್ಯಕ್ಷ ಟ್ರಂಪ್‌ ಭಾಗಿ

Upayuktha