ದೇಶ-ವಿದೇಶ ಪ್ರಮುಖ

ಭಾರತೀಯ ವಾಯುಪಡೆಗೆ ಬಂತು ರಫೇಲ್ ಬಲ; ಮೊದಲ ಕಂತಿನ 5 ವಿಮಾನಗಳ ಆಗಮನ, ಭರ್ಜರಿ ಸ್ವಾಗತ

ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷೆಯ ರಫೇಲ್‌ ಯುದ್ಧ ವಿಮಾನಗಳ ಮೊದಲ ಕಂತು (5 ಯುದ್ಧ ವಿಮಾನಗಳು) ಈಗ ಸ್ವಲ್ಪ ಹೊತ್ತಿಗೆ ಮುಂಚೆ ಭಾರತಕ್ಕೆ ಆಗಮಿಸಿದ್ದು,ವೈಮಾನಿಕ ರಕ್ಷಣಾ ಕ್ಷೇತ್ರದಲ್ಲೊಂದು ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ.

ಈ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಅಂಬಾಲಾ ನೆಲೆಯಲ್ಲಿ ಸ್ಥಿತಗೊಳ್ಳಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತಿಸಿ ಸಂಸ್ಕೃತದಲ್ಲಿ ಟ್ವೀಟ್ ಮಾಡಿದ್ದಾರೆ.

ರಫೇಲ್‌ ಯುದ್ಧ ವಿಮಾಗಳು ಭಾರತದ ವಾಯುಸೀಮೆಯೊಳಗೆ ಪ್ರವೇಶಿಸುತ್ತಲೇ ಪಶ್ಚಿಮ ಅರಬೀ ಸಮುದ್ರದಲ್ಲಿ ನಿಯೋಜಿತವಾಗಿರುವ ಭಾರತೀಯ ನೌಕಾಪಡೆಯ ಸಮರನೌಕೆ ಐಎನ್‌ಎಸ್ ಕೋಲ್ಕತಾ ಜತೆ ಸಂವಹನ ಸಾಧಿಸಿತು. ನೌಕಾಪಡೆ ವತಿಯಿಂದ ನೂತನ ಯುದ್ಧ ವಿಮಾನಗಳಿಗೆ ಸ್ವಾಗತ ಕೋರಲಾಯಿತು.

Advertisement

ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಭೂಸ್ಪರ್ಶ ಮಾಡುತ್ತಿದ್ದಂತೆಯೇ ರಫೇಲ್ ಯುದ್ಧ ವಿಮಾನಗಳಿಗೆ ಭಾರತೀಯ ಪರಂಪರೆಯಂತೆ ಅರ್ಘ್ಯ – ಪಾದ್ಯಗಳನ್ನು ಪ್ರದಾನ (ವಾಟರ್ ಸೆಲ್ಯೂಟ್) ಮಾಡಿ ಸ್ವಾಗತಿಸಲಾಯಿತು.

ರಫೇಲ್‌ ಯುದ್ಧ ವಿಮಾನದ ವಿಶೇಷತೆಗಳು:
ಭಾರತ ಫ್ರಾನ್ಸ್‌ನಿಂದ ಆಮದು ಮಾಡಿಕೊಂಡಿರುವ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನದ ಮೊದಲ ಕಂತು ಭಾರತಕ್ಕೆ ತಲುಪಿದೆ. ಮೊದಲ ಕಂತಿನಲ್ಲಿ 5 ಯುದ್ಧ ವಿಮಾನಗಳು ಭಾರತದ ನೆಲದಲ್ಲಿ ಬಂದಿಳಿದಿವೆ. ಅವುಗಳ ಪೈಕಿ 3 ವಿಮಾನಗಳು ಸಿಂಗಲ್ ಸೀಟ್‌ ಹಾಗೂ 2 ವಿಮಾನಗಳು ಅವಳಿ ಸೀಟುಗಳನ್ನು ಹೊಂದಿವೆ. ಇವುಗಳು ಅಂಬಾಲಾ ವಾಯುನೆಲೆಯಲ್ಲಿ ನಿಲುಗಡೆಯಾಗಿರುತ್ತವೆ.

ರಫೇಲ್ ಯುದ್ಧವಿಮಾನವು ಅವಳಿ ಎಂಜಿನ್‌ಗಳನ್ನು ಹೊಂದಿದ್ದು, ಬಹು ಪಾತ್ರಗಳನ್ನು ನಿಭಾಯಿಸಬಲ್ಲ ಸಮರ ವಿಮಾನವಾಗಿದೆ.

ಫ್ರೆಂಚ್‌ ವಿಮಾನ ತಯಾರಿಕಾ ಕಂಪನಿ ಡಸಾಲ್ಟ್‌ ಇದನ್ನು ಅಭಿವೃದ್ಧಿಪಡಿಸಿದೆ. ಈ ಯುದ್ಧ ವಿಮಾನಗಳು ಭೂ ಬೆಂಬಲ, ವೈಮಾನಿಕ ವಿಚಕ್ಷಣೆ, ನಿಖರ ದಾಳಿಗಳು, ಪ್ರತಿಬಂಧ ಹಾಗೂ ಅಣ್ವಸ್ತ್ರ ತಡೆ ಸಾಮರ್ಥ್ಯಗಳನ್ನು ಹೊಂದಿವೆ.

ಗಂಟೆಗೆ ಗರಿಷ್ಠ 2,223 ಕಿ.ಮೀ ದೂರ ಹಾರಬಲ್ಲ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 24,500 ಕೆ.ಜಿ ತೂಕ ಹೊಂದಿದೆ. ಅಲ್ಲದೆ 9,500 ಕೆ.ಜಿ ತೂಕದ ಲೋಡ್ ಹೊರಬಲ್ಲುದಾಗಿದೆ. 5.3 ಮೀಟರ್ ಎತ್ತರ ಹಾಗೂ 10.3 ಮೀಟರ್ ಉದ್ದವಿದೆ.

ಆಗಸದಿಂದಲೇ ಆಗಸದ ಗುರಿಯನ್ನು ಉಡಾಯಿಸಬಲ್ಲ ಕ್ಷಿಪಣಿ, ವಿಶೇಷ ರಾಕೆಟ್-ರಾಮ್‌ಜೆಟ್ ಮೋಟರ್‌ ಹೊಂದಿದ್ದು, ಇತರ ಎಲ್ಲ ಕ್ಷಿಪಣಿಗಳಿಗಿಂತ ಹೆಚ್ಚು ದೂರಕ್ಕೆ ಉಡಾಯಿಸಬಲ್ಲ ಶಕ್ತಿ ಹೊಂದಿದೆ.

ಇವುಗಳ ಜತೆಗೆ ಭಾರತದ ಅವಶ್ಯಕತೆಗಳಿಗಾಗಿಯೇ ಕೆಲವು ಹೆಚ್ಚುವರಿ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಅವುಗಳೆಂದರೆ: ಇಸ್ರೇಲಿ ಹೆಲ್ಮೆಟ್‌ನಲ್ಲಿ ಅಳವಡಿಸಿದ ಡಿಸ್‌ಪ್ಲೇ (ಪ್ರದರ್ಶನ ಪರದೆ), ರಾಡಾರ್ ಎಚ್ಚರಿಕೆ ರಿಸೀವರ್‌ಗಳು, ಲೋ ಬ್ಯಾಂಡ್ ಜಾಮರ್‌ಗಳು, 10 ಗಂಟೆಯ ಫ್ಲೈಟ್‌ ಡಾಟಾ ರೆಕಾರ್ಡಿಂಗ್‌, ಇನ್‌ಫ್ರಾರೆಡ್‌ ಸರ್ಚ್‌ ಟ್ರ್ಯಾಕಿಂಗ್‌ ಸಿಸ್ಟಂಗಳು ರಫೇಲ್ ವಿಮಾನಗಳಲ್ಲಿವೆ.

2016ರ ಸೆಪ್ಟೆಂಬರ್‌ನಲ್ಲಿ ಭಾರತ 36 ರಫೇಲ್ ಯುದ್ಧ ವಿಮಾನಗಳ ಖರಿದಿ ಆರ್ಡರನ್ನು ಫ್ರಾನ್ಸ್‌ಗೆ ಸಲ್ಲಿಸಿತ್ತು. ಇವುಗಳ ಒಟ್ಟು ವೆಚ್ಚ 59,000 ಕೋಟಿ ರೂ.

ಮೊದಲ ರಫೇಲ್ ಯುದ್ಧವ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ 2019ರ ಅಕ್ಟೋಬರ್ 8ರಂದು ಸ್ವೀಕರಿಸಿದ್ದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

ಎನರ್ಜಿ ಡ್ರಿಂಕ್ ಎಂಬ ಮೋಸದ ಜಾಲ!

Upayuktha

ಕರ್ನಾಟಕ ರಾಜ್ಯದಲ್ಲಿಂದು 101 ಕೊರೊನಾ ಪ್ರಕರಣ ಪತ್ತೆ

Upayuktha

ಸೆ.29ರಂದು ನೀರ್ಚಾಲಿನಲ್ಲಿ ಖಂಡಿಗೆ ಶಾಮಭಟ್ಟ ಜನ್ಮಶತಮಾನೋತ್ಸವ

Upayuktha
error: Copying Content is Prohibited !!