ಅಪಘಾತ- ದುರಂತ ರಾಜ್ಯ

ಬೆಂಗಳೂರಿನಲ್ಲಿ ಲಿಪ್ಟ್ ಗಾಗಿ ತೆಗೆದ ಗುಂಡಿಗೆ ಎರಡು ವರ್ಷದ ಮಗು ಬಿದ್ದು ಸಾವು

ಬೆಂಗಳೂರು: ನಗರದ ಇಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಗಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಎರಡು  ವರ್ಷದ ಮಗು ಸಾವಿಗೀಡಾದ ಘಟನೆ ನಗರದ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌.

ವಿನೋದ್‌ ಕುಮಾರ್ ಮೃತಪಟ್ಟ ಮಗವಿನ ಹೆಸರಾಗಿದ್ದು, ಮಗುವಿನ ತಂದೆ ಮೂಲತಃ ಕೊಪ್ಪಳ ತಾಲ್ಲೂಕಿನವರಾಗಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಹಾಗೆಯೇ ದಂಪತಿಗಳು, ನಿರ್ಮಾಣ ಹಂತದ ಕಟ್ಟಡ ಬಳಿಯ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದೀಗ ರಮೇಶ್ ಎಂಬುವರಿಗೆ ಸೇರಿದ್ದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಇಂದು ಬೆಳಗ್ಗೆ ಮಗುವಿನ ತಂದೆ ಕೆಲಸಕ್ಕೆ ತೆರಳಿದ್ದು, ತಾಯಿ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ಮಗು ಆಟವಾಡುತ್ತಾ ಗುಂಡಿ ಬಳಿ ಹೋಗಿ ಬಿದ್ದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಹಾಗೆಯೇ ಈ ದುರಂತ ಕ್ಕೆ ಸಂಬಂಧಪಟ್ಟ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related posts

ಕಸಾಪ ಗೌರವ ಕಾರ್ಯದರ್ಶಿಯಾಗಿ ಹಿರಿಯ ಲೇಖಕ, ಚಿಂತಕ ಕೆ. ರಾಜಕುಮಾರ್ ನೇಮಕ

Upayuktha

ಪರಿಸರ ಸ್ನೇಹಿ ಗೋಮಯ ಗಣಪತಿ ತಯಾರಿ: ನಾಳೆ ಉಚಿತ ವೆಬಿನಾರ್

Upayuktha

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್‌ನ ಪ್ರಥಮ ಸಭೆ

Upayuktha

Leave a Comment