ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ನೀಲಾವರ ಗೋಶಾಲೆಯಲ್ಲಿ 33 ಗೋದಾನ 33 ಗೋಗ್ರಾಸ‌, 33 ಪವಮಾನ …!

ಶ್ರೀ ಪೀಠಮ್ ವಾಟ್ಸಪ್ ಗ್ರೂಪಿನ ಸದಸ್ಯರಿಂದ ಅಧಿಕ ಮಾಸದ  ವಿಶೇಷ ಕಾರ್ಯಕ್ರಮ

ಉಡುಪಿ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ 33 ಸಂಖ್ಯೆಯಲ್ಲಿ ದೇವತಾ ಸತ್ಕರ್ಮಗಳನ್ನು ನಡೆಸಿದರೆ ವಿಶೇಷ ಫಲಪ್ರದ ಎನ್ನುವುದು ಶಾಸ್ತ್ರವಚನ. ಯುವ ವೈದಿಕ ವಿದ್ವಾಂಸ ವಾಮಂಜೂರು ಶ್ರೀಹರಿ ಉಪಾಧ್ಯಾಯರ ನೇತೃತ್ವದ ವಾಟ್ಸಪ್ ಗ್ರೂಪಿನ‌ ಸದಸ್ಯರು ಲೋಕ ಹಿತಕ್ಕಾಗಿ ಪ್ರಾರ್ಥಿಸಿ ಬುಧವಾರ ನೀಲಾವರ ಗೋಶಾಲೆಯಲ್ಲಿ 33 ಗೋದಾನ ಸೇವೆ, 33 ಗೋಗ್ರಾಸ ಸಮರ್ಪಣೆ, 33 ಬಾರಿ ಪವಮಾನ ಸೂಕ್ತ, ಗೋಸೂಕ್ತ ಹಾಗೂ ಶ್ರೀ ಹರಿವಾಯುಸ್ತುತಿ ಪಾರಾಯಣ ಸಹಿತ ಕಾಲೀಯ ಕೃಷ್ಣ ಮುಖ್ಯಪ್ರಾಣ ದೇವರಿಗೆ ಮಧು ಅಭಿಷೇಕ ನಡೆಸಿ ಗಮನ ಸೆಳೆದಿದ್ದಾರೆ.

ಅದರ ಜೊತೆಗೆ ಸದಸ್ಯರು ಯಕ್ಷ ಭಜನೆ, ಭಜನಾ ಸಂಕೀರ್ತನೆ ನಡೆಸಿ ದೇವರಿಗೆ ಅರ್ಪಿಸಿದರು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಯುವಕರ ಈ ವಿಶೇಷ ಸೇವೆಯಿಂದ ಅಧಿಕ ಮಾಸ ನಿಯಾಮಕನಾದ ಶ್ರೀ ಪುರುಷೋತ್ತಮ ಮಹಾವಿಷ್ಣುವಿನ ಕೃಪೆ ಸಮಸ್ತ ಲೋಕಕ್ಕೆ ಲಭಿಸಲಿ. ಗೋವಿನ ಕುಲಕ್ಕೆ ಮಂಗಲವಾಗಲಿ. ಸಾಮಾಜಿಕ ಜಾಲತಾಣಗಳನ್ನು ಇಂತಹ ಸತ್ಕರ್ಮಗಳಿಗೆ ಬಳಸುವ ಮೂಲಕ ಈ ತಂಡದ ಯುವಕರು ಮಾದರಿಯಾಗಿದ್ದಾರೆ. ತಂಡದ ಎಲ್ಲ ಸದಸ್ಯರನ್ನೂ ಭಗವಂತನು ಅನುಗ್ರಹಿಸಲಿ ಎಂದು ಸಂದೇಶ ನೀಡಿದರು.

ವೀಡಿಯೋ ನೋಡಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪರಿಣಿತ ಜಾಗತಿಕ ಮಾದರಿಯೊಂದಿಗೆ ಶೈಕ್ಷಣಿಕ ಪರಿವರ್ತನೆ ಅಗತ್ಯ: ಡಾ. ಎಂ ಮೂಡಿತ್ತಾಯ

Upayuktha

ದಿ. ಕಾರ್ತಿಕ್ ಮೇರ್ಲ ಸ್ಮರಣಾರ್ಥ ಬಸ್ ತಂಗುದಾಣ ಲೋಕಾರ್ಪಣೆ

Harshitha Harish

ನಾಳೆಯಿಂದ ಮಂಗಳೂರು ಪೂರ್ಣ ಬಂದ್; ಅಗತ್ಯವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು: ನಳಿನ್ ಕುಮಾರ್ ಕಟೀಲ್

Upayuktha

Leave a Comment