ಜಿಲ್ಲಾ ಸುದ್ದಿಗಳು ಶಿಕ್ಷಣ

ಸರ್ಕಾರಿ ಶಾಲೆಗೆ ಬೆಳಕಾಗಿ 4 ಶಾಲೆಗಳನ್ನು ದತ್ತು ಪಡೆದ ಕಿಚ್ಚ ಸುದೀಪ್

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ 4 ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್​ ದತ್ತು ಪಡೆದುಕೊಂಡಿದ್ದಾರೆ. ಆವಿಗೆ ಹಳ್ಳಿ, ಹಾಳಸಿ, ಎಸ್.ಎನ್ ಬಡಾವಣೆ ಸಾಗರ, ಎಲ್.ಎಲ್ ಹಳ್ಳಿ ಸಾಗರ ಸೇರಿ 4 ಕನ್ನಡ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ

ಯಾರೇ ಕಷ್ಟ ಕಾಲದಲ್ಲಿ ಇರಲಿ ಅವರ ಸಂಕಷ್ಟ ಅರಿತು ನಟ ಕಿಚ್ಚ ಸುದೀಪ್ ಸಹಾಯ ಮಾಡದೆ ಇರಲಾರರು. ಹಲವಾರು ಜನರಿಗೆ ತಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡುತ್ತಾ ಬಂದಿದ್ದಾರೆ.

ಕೊರೊನಾ ಹಾವಳಿಯಲ್ಲಿ ಬಡವರ, ಸಂಕಷ್ಟದಲ್ಲಿರುವವರ ಕೈ ಹಿಡಿದು ಅವರಿಗೆ ಆಶ್ರಯ ನೀಡಿದ್ದಾರೆ ಕಿಚ್ಚ ಸುದೀಪ್. ಸುದೀಪ್​ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ನಿರ್ಗತಿಕರಿಗೆ ಆಹಾರ ಮುಂತಾದ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದಾರೆ

ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಚಾರಿಟೇಬಲ್ ಟ್ರಸ್ಟ್​ನಿಂದ ಸಹಾಯ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್ ದತ್ತು ತೆಗೆದುಕೊಂಡಿದ್ದರು.

ಶಾಲೆಯ ಅಭಿವೃದ್ಧಿಯತ್ತ ಚಿತ್ತ ಹರಿಸಿರುವ ಕಿಚ್ಚ ಸುದೀಪ್ ಮಕ್ಕಳ ಕಲಿಕೆಗಾಗಿ ಕಂಪ್ಯೂಟರ್ ಹೀಗೆ ಕೆಲವು ಅಗತ್ಯ ವಸ್ತುಗಳನ್ನು ದಾನ ಮಾಡಿದ್ದಾರೆ.

ಅಷ್ಟು ಮಾತ್ರವಲ್ಲದೆ ಶಾಲೆಯ ಕಟ್ಟಡ ನಿರ್ಮಾಣ ಕೆಲಸ, ಪೈಟಿಂಗ್, ಶೌಚಾಲಯ ನಿರ್ಮಾಣ ಹೀಗೆ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಒದಗಿಸಿದೆ.

ಕೊರೋನಾದಿಂದಾಗಿ ಮಕ್ಕಳು ಮನೆಯಲ್ಲಿಯೇ ಆನ್​ಲೈನ್ ಕ್ಲಾಸ್ ಮೊರೆಹೋಗಿದ್ದಾರೆ. ಈ ಸಮಯದಲ್ಲಿ ಶಾಲಾ ಅಭಿವೃದ್ಧಿಯತ್ತ ಚಿತ್ತ ಹರಿಸಿದೆ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಕೊರೊನಾ ಮುಗಿದು ಮಕ್ಕಳು ಶಾಲೆಗೆ ಬರುವ ವೇಳೆ  ಶಾಲೆಯ ರಂಗ ನ್ನು ಬದಲಾಯಿಸಲಿದ್ದಾರೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಆಗಸ್ಟ್ 6 ರಿಂದ 13: ತುಳು ಅಕಾಡೆಮಿ ಚಾವಡಿಯಲ್ಲಿ ಪ್ರವಚನ ಸಪ್ತಾಹ

Upayuktha

ಉಡುಪಿ ಜಿಲ್ಲೆಯಲ್ಲಿ ಶೀಘ್ರವೇ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್: ಸಚಿವ ಡಾ. ಸುಧಾಕರ್

Upayuktha

ಜುಲೈ 13ರಿಂದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ: ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ

Upayuktha

Leave a Comment

error: Copying Content is Prohibited !!