ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಮಣ ದ ಅಂಗವಾಗಿ ಇಂದು ಮಕರ ಜ್ಯೋತಿ ದರ್ಶನ ಆಗಿದೆ.
ಮಕರ ಸಂಕ್ರಾಂತಿಯ ವೇಳೆ ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ಅಯ್ಯಪ್ಪ ಸ್ವಾಮಿ ಜನನವಾಯಿತೆನ್ನುವ ನಂಬಿಕೆ ಇದ್ದು ಸ್ವಾಮಿಯು ಪ್ರತಿ ಬಾರಿಯೂ ಮಕರ ಸಂಕ್ರಾಂತಿಯಂದು ಜ್ಯೋತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಪ್ರತೀತಿ ಇದೆ. ಇದನ್ನು ನೋಡಿದ ಭಕ್ತರ ಇಷ್ಟಾರ್ಥ ನೆರವೇರುತ್ತದೆ ಎಂದು ಪುರಾಣಗಳ ಉಲ್ಲೇಖವಿದೆ. ಇದಕ್ಕಾಗಿ ಸಾವಿರಾರು ಸಂಖ್ಯೆಯ ಭಕ್ತರು ಈ ಪುಣ್ಯದಿನದಂದು ಶಬರಿಮಲೆಗೆ ಆಗಮಿಸುತ್ತಾರೆ,
“ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಭಜನೆ ಮಾಡುತ್ತಾ ಭಕ್ತರು ಜ್ಯೋತಿಯನ್ನು ಕಂಡು ಭಾವಪರವಶರಾಗುತ್ತಾರೆ.
ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ದೇವಾಲಯ ಆಡಳಿತವು ಮುಂಜಾಗ್ರತೆ ವಹಿಸಿದ್ದು ಕೇವಲ ಐದು ಸಾವಿರ ಭಕ್ತರಿಗೆ ಮಾತ್ರ ಮಕರ ಜ್ಯೋತಿಯ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು.