ದೇಶ-ವಿದೇಶ

56 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಮಿತ್ ಶಾ; ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಇಂದು 56 ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಮಿತ್ ಶಾ ಹುಟ್ಟುಹುಬ್ಬದ ಶುಭಾಶಯ ತಿಳಿಸಿದ್ದಾರೆ.

ಮೋದಿಯವರು ಟ್ವೀಟ್ ಮೂಲಕ “ದೇಶ ಪ್ರಗತಿ ಸಾಧಿಸುವತ್ತಾ ಅವರು ನೀಡುತ್ತಿರುವ ಸಮರ್ಪಣೆ ಮತ್ತು ದಕ್ಷತಾ ಮನೋಭಾವಕ್ಕೆ ನಮ್ಮ ರಾಷ್ಟ್ರ ಸಾಕ್ಷಿಯಾಗಿದೆ. ಬಿಜೆಪಿಯನ್ನು ಬಲಪಡಿಸುವ ಅವರ ಪ್ರಯತ್ನಗಳೂ ಗಮನಾರ್ಹವಾಗಿವೆ. ಅವರು ದೇಶ ಸೇವೆ ಮಾಡಲು ದೇವರು ಧೀರ್ಘ ಆಯಸ್ಸು ಮತ್ತು ಆರೋಗ್ಯಕೊಟ್ಟು ಆಶೀರ್ವದಿಸಲಿ” ಎಂದು ಪ್ರಧಾನಿ ಟ್ವೀಟ್ ಸಂದೇಶ ಮೂಲಕ ತಿಳಿಸಿದ್ದಾರೆ.

ಹಾಗೆಯೇ 1964ರಲ್ಲಿ ಮುಂಬೈನಲ್ಲಿ ಜನಿಸಿದ ಅಮಿತ್ ಶಾ ಅವರು, ಮೊದಲಿನಿಂದಲೂ ಆರ್ ಎಸ್ ಎಸ್ ನೊಂದಿಗೆ ತೊಡಗಿಸಿಕೊಂಡಿದ್ದರು. ಹಾಗೆಯೇ ಗುಜರಾತಿನಲ್ಲಿ ಬಿಜೆಪಿ ಸರ್ಕಾರದ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

2014ರಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾದ ನಂತರ ಹಲವು ರಾಜ್ಯಗಳಲ್ಲಿ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಪಕ್ಷ ಜಯಭೇರಿ ಬಾರಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

Related posts

ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಪುನರಾರಂಭಕ್ಕೆ ಮಾರ್ಗಸೂಚಿ

Harshitha Harish

ಸರ್ಜಿಕಲ್ ದಾಳಿಗಳು ಪಾಕ್‌ಗೆ ಸರಿಯಾದ ಸಂದೇಶ ನೀಡಿವೆ: ಸೇನಾ ಮುಖ್ಯಸ್ಥ ಜ. ಮನೋಜ್ ಮುಕುಂದ್

Upayuktha

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಇಂದು ‘ಭಾರತ ರತ್ನ’ ಪ್ರದಾನ

Upayuktha

Leave a Comment