ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಭಾರತದ ಯುವಶಕ್ತಿ ಭರವಸೆ ಮೂಡಿಸಿದೆ: ಪ್ರೊ. ಕೆ ಎಸ್‌ ಜಯಪ್ಪ

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಡಗರದ ಗಣರಾಜ್ಯೋತ್ಸವ

ಮಂಗಳೂರು: ಭಾರತ ಗಣರಾಜ್ಯವಾಗಲು ಶ್ರಮಿಸಿದ ಸಾಧಕರನ್ನು ಮತ್ತು ನಮ್ಮ ಸಂವಿಧಾನದ ನಾಲ್ಕು ಅಂಗಗಳೇ ಆಗಿರುವ ಸೈನಿಕರು, ರೈತರು, ಕಾರ್ಮಿಕರು ಮತ್ತು ರಾಜಕೀಯ ಮುತ್ಸದ್ಧಿಗಳಿಗೆ ನಾವು ಕೃತಜ್ಞರಾಗಿರೋಣ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ. ಕೆ ಎಸ್‌ ಜಯಪ್ಪ ಹೇಳಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ, ಎನ್‌ಸಿಸಿ ಕೆಡೆಟ್‌ಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕೋವಿಡ್‌ ಸಾಂಕ್ರಾಮಿಕವನ್ನೂ ಮೆಟ್ಟಿ ನಿಂತು, ಸಮಸ್ಯೆಯನ್ನು ಅವಕಾಶವಾಗಿಸಿಕೊಂಡ ದೇಶದ ಯುವಜನತೆ ಭರವಸೆ ಮೂಡಿಸಿದೆ. ನಾವೀಗ ಕೋವಿಡ್‌ ಲಸಿಕೆಯನ್ನು ಬೇರೆ ದೇಶಗಳಿಗೆ ನೀಡುವಷ್ಟು ಮುಂದುವರಿದಿದ್ದೇವೆ. ಮಾನವ ಸಂಪನ್ಮೂಲದ ಸದ್ಭಳಕೆಯಾದರೆ ಭಾರತ ವಿಶ್ವದ ಬಲಿಷ್ಠ ಶಕ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ, ಎಂದು ಅಭಿಪ್ರಾಯಪಟ್ಟರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲ ಡಾ. ಹರೀಶ್‌ ಎ, ನಾವು ನಮ್ಮ ಜವಾಬ್ದಾರಿ ಅರಿತು ದೇಶಕ್ಕೆ ಉತ್ತಮ ಪ್ರಜೆಗಳಾಗೋಣ, ಎಂದು ಕಿವಿಮಾತು ಹೇಳಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್‌ ಅತಿಥಿಗಳನ್ನು ಸ್ವಾಗತಿಸಿದರು. ಎನ್‌.ಸಿ.ಸಿ ನೌಕಾದಳ ಅಧಿಕಾರಿ ಡಾ. ಯತೀಶ್‌ ಕುಮಾರ್‌ ಧನ್ಯವಾದ ಸಮರ್ಪಿಸಿದರು.

ಎನ್‌.ಸಿ.ಸಿ ಭೂದಳ ಅಧಿಕಾರಿ ಡಾ. ಜಯರಾಜ್‌ ಎನ್‌, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ, ಎನ್‌.ಎಸ್‌.ಎಸ್‌ ಅಧಿಕಾರಿಗಳಾದ ಡಾ. ಸುರೇಶ್‌, ಡಾ. ಗಾಯತ್ರಿ ಎನ್‌ ಉಪಸ್ಥಿತರಿದ್ದರು. ವಿನ್ಯಾಸ್‌ ಕಾರ್ಯಕ್ರಮ ನಿರೂಪಿಸಿದರು.

ಲಿಖಿತಾ ಮತ್ತು ತಂಡ ಪ್ರಸ್ತುತಪಡಿಸಿದ ‘ಹಮ್‌ ಹೋಂಗೇ ಕಾಮಿಯಾಬ್‌…’ ಗಾಯನ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ನೀರಿನ ದರ ಏರಿಕೆ ಬಗ್ಗೆ ಆತಂಕ ಬೇಡ: ನೂತನ ಮೇಯರ್ ದಿವಾಕರ್ ಪಾಂಡೇಶ್ವರ

Upayuktha

ನೀರ್ಚಾಲು ಕೆಎಸಿಎಂಎಸ್‍ಗೆ ಅತ್ಯುತ್ತಮ ಮಾರ್ಕೆಟಿಂಗ್ ಸೊಸೈಟಿ ಪ್ರಶಸ್ತಿ

Upayuktha

ಸಾರ್ವಜನಿಕರಿಗೆ ತೊಂದರೆಯಾಗದೆ ಮರಳು ಪೂರೈಕೆಯಾಗಲಿ: ಸಚಿವರ ಸೂಚನೆ

Upayuktha