ಅಪಘಾತ- ದುರಂತ ದೇಶ-ವಿದೇಶ

ತೆಲಂಗಾಣ ದಲ್ಲಿ ಭೀಕರ ರಸ್ತೆ ಅಪಘಾತ ; 9 ಕಾರ್ಮಿಕರು ಸಾವು

ಹೈದರಾಬಾದ್​: ನೆರೆಯ ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೂಲಿ ಕೆಲಸಕ್ಕೆ ಹೋಗುತ್ತಿದ್ದ 9 ಕಾರ್ಮಿಕರು ಮೃತಪಟ್ಟರು.

ತೆಲಂಗಾಣದ ನಲ್ಗೊಂಡ ಜಿಲ್ಲೆಯ ದೇವರಕೊಂಡಮಂಡಲದ ಪೆದ್ದಅಡಿಶರ್ಲಪಲ್ಲಿಯ ಅಂಗಡಿಪೇಟ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಕಂಟೇನರ್​ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ  9 ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತಪಟ್ಟ ಕಾರ್ಮಿಕರೆಲ್ಲರೂ ಚಿಂತಬಾವಿ ಗ್ರಾಮದ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮುಗಿಸಿಕೊಂಡು ಆಟೋದಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ದೇವರಕೊಂಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ‌ಆಟೋ ಚಾಲಕ‌ ಮಲ್ಲೇಶ, ಕೂಲಿಗಳಾದ ನೋಮಲ ಪೆದ್ದಮ್ಮ, ನೋಮಲ ಸೈದಮ್ಮ,‌ ಕೊಟ್ಟಂ ಪೆದ್ದಮ್ಮ, ಗೊಡುಗು ಇದ್ದಮ್ಮ, ಮಲ್ಲಮ್ಮ, ಅಂಜಮ್ಮ ಎಂದು ಗುರುತಿಸಲಾಗಿದೆ.

ಐದಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದು, ಆಟೋದಲ್ಲಿ 20ಕ್ಕೂ ಹೆಚ್ಚಿನ ಜನ ಇದ್ದರು ಎಂದು ಮಾಹಿತಿ ತಿಳಿದು ಬಂದಿದೆ.

 

Related posts

ಅಯೋಧ್ಯೆ ವಿಚಾರಣೆ ಪೂರ್ಣ: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

Upayuktha

ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ..!

Harshitha Harish

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರ ತಂದೆ ನಿಧನ

Harshitha Harish