ದೇಶ-ವಿದೇಶ

ಅಟಲ್ ಬಿಹಾರಿ ವಾಜಪೇಯಿ ಯವರ 96 ನೇ ಹುಟ್ಟುಹಬ್ಬ; ಪ್ರಧಾನಿ ಹಾಗೂ ಹಲವು ನಾಯಕರಿಂದ ಗೌರವ ನಮನ

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಯವರ 96ನೇ ಹುಟ್ಟುಹಬ್ಬ ಇಂದು. ಈ ವೇಳೆಯಲ್ಲಿ ಹಲವು ನಾಯಕರು ಅವರನ್ನು ಸ್ಮರಿಸಿದ್ದಾರೆ.

ದೆಹಲಿಯಲ್ಲಿರುವ ಅಟಲ್ ಸಮಾದಿ ಸದೈವ್ ಅಟಲ್ ಬಳಿ ಬೆಳಗ್ಗೆಯೇ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುಷ್ಪವನ್ನಿಟ್ಟು ಗೌರವ ನಮನ ಸಲ್ಲಿಸಿದರು.

ಸದೈವ್ ಅಟಲ್ ಗೆ ತೆರಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಅಗಲಿದ ನಾಯಕನನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.

ಪ್ರಧಾನ ಮಂತ್ರಿ ಟ್ವೀಟ್ ಮೂಲಕ , ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜಯಂತಿ ಸಂದರ್ಭದಲ್ಲಿ ಅವರಿಗೆ ಗೌರವ ನಮನಗಳು. ಅಟಲ್ ಜೀಯವರು ದೇಶವನ್ನು ಅಭೂತಪೂರ್ವ ಯಶಸ್ಸಿನೆಡೆಗೆ ಕೊಂಡೊಯ್ದಿದ್ದರು. ಬಲಿಷ್ಠ ಮತ್ತು ಸಂಪದ್ಭರಿತ ದೇಶವನ್ನು ಕಟ್ಟುವಲ್ಲಿನ ಅವರ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

Related posts

ಚುನಾವಣೆಗೆ ಮುನ್ನವೇ ಮಹಾರಾಷ್ಟ್ರ, ಹರ್ಯಾಣ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ

Upayuktha

ಲಾಕ್‌ಡೌನ್ ಅಧಿಕಾರ ಇನ್ನು ರಾಜ್ಯಗಳಿಗಿರುವುದು ಕಂಟೈನ್‌ಮೆಂಟ್ ವಲಯಗಳಲ್ಲಿ ಮಾತ್ರ

Upayuktha News Network

ಅಮೆರಿಕದಲ್ಲಿ ಕೊರೊನಾ ರುದ್ರನರ್ತನ: ಸಾವಿನ ಸುದ್ದಿಗಾಗಿಯೇ 15 ಮೀಸಲಿಟ್ಟ ‘ಬೋಸ್ಟನ್ ಗ್ಲೋಬ್’ ಪತ್ರಿಕೆ

Upayuktha