ರಾಜ್ಯ

ಬೆಂಗಳೂರು ; ಬಿಲ್ಡರ್ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು: ಮನೆಯಲ್ಲೇ ಬಿಲ್ಡರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ‌ ನಗರದ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ವಿವೇಕ್ (50) ವರ್ಷ ವಯಸ್ಸಿನವರಾಗಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ..

ಜಾಯಿಂಟ್ ವೆಂಚರ್ಸ್ ನಲ್ಲಿ ರಹೀಂ ಹಾಗೂ ವಿವೇಕ್ ಸೇರಿ ಅಪಾರ್ಟ್ ಮೆಂಟ್ ವೊಂದು ನಿರ್ಮಾಣ ಮಾಡುತ್ತಿದ್ದರು. ಆದರೆ, ಶೇ. 90ರಷ್ಟು ಕೆಲಸ ಕೊನೆಗೊಂಡಿದ್ದ ಬಳಿಕ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ರಹೀಂ ಅಡ್ಡಗಾಲು ಹಾಕಿದರು.

ಅಷ್ಟು ಮಾತ್ರವಲ್ಲದೆ, ಒಪ್ಪಂದದಂತೆ ವಿವೇಕಗೆ ಹಣ ನೀಡದೆ ಕಿರುಕುಳ ನೀಡಲು ಆರಂಭಿಸಿದರು‌. ನಿನ್ನೆ ಬೆಳಿಗ್ಗೆ ರಹೀಂ ಅವರ ಬೆಂಬಲಿಗರು ಅಪಾರ್ಟ್ ಮೆಂಟ್ ಕಟ್ಟಡದ ಹತ್ತಿರ ಬಂದು ದಾಂಧಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಕಾರಣದಿಂದ ಮನನೊಂದು ವಿವೇಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related posts

ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸಚಿವ ಅರವಿಂದ ಲಿಂಬಾವಳಿ ರಾಜೀನಾಮೆ

Upayuktha

ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆ ದಾಖಲು

Harshitha Harish

ರಾಜ್ಯದಲ್ಲಿ 6000 ಪಶುವೈದ್ಯರ ನೇಮಕ ಶೀಘ್ರ: ಪ್ರಭು ಚವ್ಹಾಣ್

Upayuktha