ಗ್ರಾಮಾಂತರ ಜಿಲ್ಲಾ ಸುದ್ದಿಗಳು

ಅಂಗನವಾಡಿ ಅಂಗಳಕ್ಕೂ ಕಾಲಿಟ್ಟ ಉದ್ಯಾನವನ- ಫಲಿಸಿತು ಯುವಕರ ಶ್ರಮದಾನ

ಮೇಕೇರಿ ಗ್ರಾಮ ಪಂಚಾಯಿತಿಯಿಂದ ಪ್ರಥಮ ಹೆಜ್ಜೆಗೆ ಸ್ವಾಗತ ಯುವಕ ಸಂಘದ ಸಾಥ್‌

ಶ್ರೀರಾಜ್ ಕುಲಾಲ್ ಮೇಕೇರಿ

ಮೇಕೇರಿ (ಮಡಿಕೇರಿ): ನಗರ ಪ್ರದೇಶಗಳಿಗೆ, ವಸತಿ ಸಮುಚ್ಛಯಗಳಿಗೆ ಸೀಮಿತವಾಗಿದ್ದ ಉದ್ಯಾನವನಗಳು ಈಗ ಗ್ರಾಮದ ಅಂಗನವಾಡಿಗಳ ಅಂಗಳದಲ್ಲಿ ನಿರ್ಮಾಣವಾಗಿರುವುದು ವಿಶೇಷವಾಗಿದೆ. ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮಡಿಕೇರಿ ಸಮೀಪದ ಮೇಕೇರಿಯ ಗ್ರಾಮದ ಅಂಗನವಾಡಿಯ ಅಂಗಳದಲ್ಲಿ ಸುಂದರವಾದ ಉದ್ಯಾನವನವೊಂದು ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಮೇಕೇರಿ ಗ್ರಾಮದ ಸುಭಾಶ್ ನಗರದ ಅಂಗನವಾಡಿಯ ಮುಂಭಾಗ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುತ್ತಿರುವ ಈ ಉದ್ಯಾನವನಕ್ಕೆ ಮೇಕೇರಿ ಸ್ವಾಗತ ಯುವಕ ಸಂಘ ಸಾಥ್ ಕೊಟ್ಟ ಕಾರಣ ಕೇವಲ ತಿಂಗಳಲ್ಲಿ ಉದ್ಘಾಟನೆಗೆ ಕಾದು ಕುಳಿತಿದೆ.

ಅಂಗನವಾಡಿಗೆ ಬರುವ ಪುಟ್ಟಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮವನ್ನು ಹುಟ್ಟುಹಾಕುವಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನ ಸಾಕ್ಷಿಯಾಗಲಿದೆ. ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಜವಾಬ್ದಾರಿಗೆ ಸ್ವಾಗತ ಯುವಕ ಸಂಘದ ಸದಸ್ಯರು ಹೆಗಲು ಕೊಟ್ಟಿದ್ದಾರೆ.

ನಮ್ಮ ಬಡಾವಣೆಯಲ್ಲಿ ಇಂತಹ ಒಂದು ಸುಂದರ ಉದ್ಯಾನವನ ನಿರ್ಮಾಣ ಆಗಿರುವುದು ನಮಗೆ ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ ಸುಭಾಶ್ ನಗರ ಬಡಾವಣೆಯ ನಿವಾಸಿಗಳು.

ಉದ್ಯಾನವನ ನಿರ್ಮಾಣದ ಕಲ್ಪನೆ ಮೇಕೇರಿ ಪಂಚಾಯಿತಿಯದ್ದಾದರೂ ಇದಕ್ಕೆ ಗ್ರಾಮಸ್ಥರ ಸಹಕಾರ ಉತ್ತಮವಾಗಿ ಲಭಿಸಿದೆ. ಮೇಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುಭಾಸ್ ನಗರದ ಅಂಗನವಾಡಿಯ ಅಂಗಳದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಮೇಕೇರಿಯ ಸ್ವಾಗತ ಯುವಕ ಸಂಘದ ಸದಸ್ಯರು ಯಾವುದೇ ಫಲಾಪೇಕ್ಷೆಯಿಲ್ಲದೆ ರಾತ್ರಿ, ಹಗಲೆನ್ನದೆ ದುಡಿಯುವ ಮೂಲಕ ಸುಭಾಸ್ ನಗರದ ಅಂಗನವಾಡಿಯ ಉದ್ಯಾನವನವನ್ನು ಸುಂದರಗೊಳಿಸುವಲ್ಲಿ ಸಫಲರಾಗಿದ್ದಾರೆ. ಅವರಿಗೆ ಧನ್ಯವಾದಗಳು ಎಂದಿದ್ದಾರೆ ಮೇಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಅವರು.

‌ನಗರ ಪ್ರದೇಶಗಳಿಗೇ ಸೀಮಿತ ಅನ್ನುವಂತಿದ್ದ ಉದ್ಯಾನವನಗಳು ಇದೀಗ ಗ್ರಾಮೀಣ ಭಾಗಗಳಲ್ಲಿ ನಿರ್ಮಾಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹಿರಿಯರಿಗೆ ಉದ್ಯಾನವನದಲ್ಲಿ ವಾಕಿಂಗ್ ಏರಿಯಾ ಮತ್ತು ಸಣ್ಣ ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆಗಳಿರುವುದರಿಂದ ಸಾರ್ವಜನಿಕರಿಗೆ ಅನುಕೂಲವೆನಿಸಿದೆ ಎಂದು ಸ್ಥಳೀಯರಾದ ‌ಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‌ನಮ್ಮ ಅಂಗನವಾಡಿಯಲ್ಲಿ ಉದ್ಯಾನವನ ನಿರ್ಮಿಸಲು ಶ್ರಮಿಸಿದ ಮೇಕೇರಿ ಗ್ರಾಮ ಪಂಚಾಯಿತಿ ಮತ್ತು ಸ್ವಾಗತ ಯುವಕ ಸಂಘಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಅಲ್ಲದೆ ಮಕ್ಕಳಿಗೆ ಆಟವಾಡಲು ಜೊಕಾಲಿಯಂತಹ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಸಂತಸ ತಂದಿದೆ ಎಂದು ಸುಭಾಸ್ ನಗರ ಅಂಗನವಾಡಿ ಶಿಕ್ಷಕಿ ಸರಸ್ವತಿ ಅವರು ನಗುನಗುತಾ ಹೇಳಿದರು.

‌ಮೇಕೇರಿಯ ಸ್ವಾಗತ ಯುವಕ ಸಂಘದ ಅಧ್ಯಕ್ಷರಾದ ವಿಜು ಹರೀಶ್ ಅವರನ್ನು ಮಾತನಾಡಿಸಿದಾಗ, ಪಂಚಾಯಿತಿಯವರು ಉದ್ಯಾನವನ ನಿರ್ಮಾಣದ ಕುರಿತು ನಮ್ಮ ಬಳಿ ಪ್ರಸ್ತಾಪಿಸಿದಾಗ ಸಂಘದ ಎಲ್ಲಾ ಸದಸ್ಯರೂ ಒಪ್ಪಿಕೊಂಡು ಪಂಚಾಯಿತಿಯೊಂದಿಗೆ ಕೈಜೋಡಿಸಿದ್ದೇವೆ ಎಂದು ಹೇಳಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬೆಳ್ತಂಗಡಿ: ನಿವೃತ್ತ ಸಂಘಟನಾಧಿಕಾರಿ ವೆಂಕಟರಮಣ ಶರ್ಮರಿಗೆ ಗೌರವಾರ್ಪಣೆ

Sushmitha Jain

ಓ ಬಾಬ್ರೇ ಭಾಳ್ ಚಲೋ ಮಾಡ್ಯಾರಾ…! ನೀಲಾವರ ಗೋಶಾಲೆ ಕಂಡು ಪ್ರಭು ಚವ್ಹಾಣ್ ಉದ್ಗಾರ

Upayuktha

ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ: ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha