ಹೊಸದಿಲ್ಲಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವ ಮತ್ತು ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಒಂದೇ ಒಂದು ಟ್ವೀಟ್ ಮಾಡಿ ಭಾರಿ ನಷ್ಟ ಅನುಭವಿಸಿದ್ದಾರೆ.
ಬಿಟ್ಕಾಯಿನ್ ಬಗೆಗಿನ ಟ್ವೀಟ್ ಭಾರಿ ವೈರಲ್ ಆಗಿದ್ದು, ಕೇವಲ ಒಂದು ದಿನದಲ್ಲಿ 15 ಬಿಲಿಯನ್ ಡಾಲರ್ನಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.
ಕ್ರಿಪ್ಟೋಕರೆನ್ಸಿ ಕುರಿತು ಕಳೆದ ವಾರ ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದರು. ‘ಬಿಟ್ಕಾಯಿನ್ ನೋಡಿದರೆ ಈಥರ್ ಕ್ರಿಪ್ಟೋಕರೆನ್ಸಿ ಬೆಲೆಗಳು ಹೆಚ್ಚಾಗಿವೆ’ ಎಂದು ಪೋಸ್ಟ್ ಮಾಡಿದ್ದರು.
According to @elonmusk "Bitcoin is almost as BS as fiat money." So Musk regards both #Bitcoin and fiat as BS. I agree, I just think Bitcoin, which is digital fiat, is even more BS than the paper fiat issued by central banks. #Gold is not BS. It's real money and better than both!
— Peter 🍆 Schiff (@PeterSchiff) February 19, 2021
ಈ ಟ್ವಿಟ್ಟರ್ ವೈರಲ್ ಆಗುತ್ತಿದ್ದಂತೆ ಟೆಸ್ಲಾ ಷೇರು ಬೆಲೆ ಅಮೆರಿಕದ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಶೇ 8.6ರಷ್ಟು ಕುಸಿದಿದೆ. 2020ರ ಸೆಪ್ಟೆಂಬರ್ ನಂತರ ಕಂಪನಿಯ ಷೇರುಗಳು ಈಗ ಮತ್ತೆ ತೀವ್ರವಾಗಿ ಕುಸಿದಿರುವುದು ಗಮನಾರ್ಹವಾಗಿದೆ.
ವಿಶ್ವದ 500 ಶ್ರೀಮಂತ ಉದ್ಯಮಿಗಳ ಬ್ಲೂಮ್ಬರ್ಗ್ ಬಿಲಿಯನೇರ್ಗಳ ಸೂಚ್ಯಂಕದಲ್ಲಿ 183.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಮಸ್ಕ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಮೆಜಾನ್.ಕಾಮ್ ಇಂಕ್ ಸಂಸ್ಥಾಪಕ ಜೆಫ್ ಬೆಜೋಸ್ 186.3 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅಗ್ರ ಸ್ಥಾನವನ್ನು ಪುನಃ ಪಡೆದುಕೊಂಡಿದ್ದಾರೆ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ