ರಾಜ್ಯ

ಕೋಲಾರ ಜಿಲ್ಲೆಯ ಗೊಲ್ಲಹಳ್ಳಿ ಜನರ ಸ್ವಯಂಘೋಷಿತ ನಿರ್ಬಂಧ: ರಾಜ್ಯಕ್ಕೆ ಮಾದರಿ

(ಚಿತ್ರ: ಟಿವಿ9 ಕನ್ನಡ ಸ್ಕ್ರೀನ್‌ಶಾಟ್)

ಬೆಂಗಳೂರು: ಕೊರೊನಾ ಭೀತಿಯಿಂದ ಜನ ಗೊಂದಲಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿಯೇ, TV9 ಕನ್ನಡ ಸುದ್ದಿವಾಹಿನಿಯಲ್ಲಿ ಕೋಲಾರದ ಗೊಲ್ಲಹಳ್ಳಿಯ ಬಗ್ಗೆ ಒಂದು report ನೋಡಿದೆ…

ಈ ಹಳ್ಳಿಯಲ್ಲಿ ಇನ್ನೆರಡು ತಿಂಗಳ ಕಾಲ, ಯಾರೂ ಹಳ್ಳಿಯಿಂದ ಹೊರ ಹೋಗುವ ಹಾಗಿಲ್ಲ. ಹಾಗೆಯೇ ಹೊರಗಡೆಯಿಂದ ಯಾರೂ ಹಳ್ಳಿಯ ಒಳಕ್ಕೆ ಬರುವ ಹಾಗಿಲ್ಲ. ಈ ರೀತಿಯ ಒಂದು ಸ್ವಯಂ ಘೋಷಿತ ನಿರ್ಬಂಧನೆಯನ್ನು ಹಳ್ಳಿಯ ಜನರೇ ಹೇರಿಕೊಂಡಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಅವರು ಮಾಡಿಕೊಂಡಿರುವ ವ್ಯವಸ್ಥೆ ಹೀಗಿದೆ :

1. ಹಳ್ಳಿಯಲ್ಲಿ ಉತ್ಪಾದನೆಯಾಗುತ್ತಿರುವ ದಿನದ ಹಾಲನ್ನು ಹಳ್ಳಿಯ ಎಲ್ಲರ ಬಳಕೆಗೆ ಮಾತ್ರವೇ ಮೀಸಲಿಟ್ಟಿದ್ದಾರೆ. ಹಾಗೆಯೇ, ಹಳ್ಳಿಯಲ್ಲಿ ಬೆಳೆವ ತರಕಾರಿ ಕೂಡ. ಹೀಗಾಗಿ, ಇದನ್ನರಸಿ ಹಳ್ಳಿಗರು ಹೊರ ಹೋಗುವ ಪ್ರಮೇಯವಿಲ್ಲ.

2. ಇನ್ನೆರಡು ತಿಂಗಳಿಗೆ ಬೇಕಾಗುವ ಆವಶ್ಯಕ ವಸ್ತುಗಳನ್ನು ಕೂಡ ಹಳ್ಳಿಯವರು ತಮ್ಮ ತಮ್ಮ ಮನೆಗಳಲ್ಲಿ ಶೇಖರಿಸಿಕೊಂಡಿದ್ದಾರೆ.

3. ಹಳ್ಳಿಯ ಎಲ್ಲ ಮುಖ್ಯ ರಸ್ತೆಗಳಲ್ಲಿ ನೂರು ಮಂದಿ volunteers, ಸರದಿಯ ಮೇಲೆ, ಚಕ್ಕುಬಂದಿ ಹಾಕಿ ಹಳ್ಳಿಗರ ಚಲನವಲನವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ.

4. ಈ ವೇಳೆಯಲ್ಲಿ ಯಾರಿಗಾದರೂ ಯಾವುದೇ ಕಾರಣಕ್ಕೆ ಆರೋಗ್ಯ ಸಮಸ್ಯೆ ಉಂಟಾದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯುವ ವ್ಯವಸ್ಥೆಯೊಂದನ್ನು ಮಾಡಿಕೊಂಡಿದ್ದಾರೆ..

5. ಹಳ್ಳಿಯವರು ಯಾರಾದರೂ ದೂರ ಇದ್ದರೆ, ಅವರನ್ನೆಲ್ಲ ಹಳ್ಳಿಗೆ ಈಗಾಗಲೇ ಬರ ಮಾಡಿಕೊಂಡಿದ್ದಾರೆ. ದೂರ ಉಳಿಯಲೇ ಬೇಕಾದವರಿಗೆ ಇನ್ನೆರಡು ತಿಂಗಳು ಇಲ್ಲಿಗೆ ಬರದಂತೆ ತಿಳಿ ಹೇಳಿದ್ದಾರೆ.

ಟಿವಿ9 ಕನ್ನಡದ ಪೂರ್ಣ ವರದಿ ಇಲ್ಲಿದೆ ನೋಡಿ:

ಗ್ರಾಮದ ಹಿರಿಯರಾದ ಗೋಪಾಲಯ್ಯ ಎಂಬುವವರು ಈ report ನಲ್ಲಿ ಹೇಳಿದ್ದೇನೆಂದರೆ – “ಎಲ್ಲವನ್ನೂ ಸರ್ಕಾರವೇ ಮಾಡಲಾಗುವುದಿಲ್ಲ. ಹಾಗಾಗಿ, ನಮ್ಮ ಹಳ್ಳಿಯ ಎಲ್ಲರೂ ನಿನ್ನೆ ಸಭೆ ನಡೆಸಿ, ಈ ಕ್ರಮವನ್ನು ಪಾಲಿಸುವ ನಿರ್ಧಾರ ಮಾಡಿದ್ದೇವೆ. Let the government take care of the sick. We will take care of ourselves to ensure that we don’t get sick…”

ವಾಹ್.. ನನಗಂತೂ ಈ ರಿಪೋರ್ಟ್ ನೋಡಿ ಅತೀವ ಸಂತಸವಾಯಿತು. ಗೊಲ್ಲಹಳ್ಳಿಯ ಜನತೆಯ ಈ ಪರಿಯ ಉನ್ನತವಾದ ಜವಾಬ್ದಾರಿ ದೇಶದ ಪ್ರತಿಯೊಬ್ಬರದೂ ಆದರೆ, ಎಷ್ಟು ಚೆಂದ ಅಲ್ಲವೇ? ಬೇರೆ ಹಳ್ಳಿಗಳಿಗೆ ಹಾಗೂ ಸಮುದಾಯಗಳಿಗೆ ಇದೊಂದು ಮಾದರಿ ಎನ್ನಿಸಿತು. ಹಾಗಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ…

ಗೊಲ್ಲಹಳ್ಳಿಯ ಎಲ್ಲ ಸತ್ಪ್ರಜೆಗಳಿಗೆ ತುಂಬು ಮನದ ಅಭಿನಂದನೆಗಳು

ನಾವೆಲ್ಲರೂ
ಎಲ್ಲರ ಆರೋಗ್ಯಕ್ಕಾಗಿ
ಎಲ್ಲರ ಹಿತಕ್ಕಾಗಿ
ಎಲ್ಲರ ಒಳಿತಿಗಾಗಿ
ಕೈ ಜೋಡಿಸೋಣ…
ನಮ್ಮ ನಮ್ಮ ನೆಲೆಗಟ್ಟಿನಲ್ಲಿ
ನಮ್ಮ ನಮ್ಮ ಕರ್ತವ್ಯವನ್ನು ಪಾಲಿಸೋಣ
ಅಳಿಲು ಸೇವೆಯನ್ನು ಮಾಡೋಣ…
ಗೊಲ್ಲಹಳ್ಳಿಯನ್ನು ಅನುಸರಿಸೋಣ

– ಸತ್ಯೇಶ್ ಬೆಳ್ಳೂರ್

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಸುಜಯ್ ಬಂಧನ

Harshitha Harish

ವಿದ್ಯಾಗಮ ಕಾರ್ಯ ಕ್ರಮ ತಾತ್ಕಾಲಿಕ ಸ್ಥಗಿತ- ಶಿಕ್ಷಣ ಸಚಿವ ಸುರೇಶ್ ಕುಮಾರ್

Harshitha Harish

ಇಂದಿನಿಂದ ಕೆಜಿಎಫ್- 2 ಚಿತ್ರೀಕರಣ ಆರಂಭ

Harshitha Harish