ಅಪಘಾತ- ದುರಂತ

ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ..!

○ಸುಳ್ಯ : ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿ ಸರಣಿ ಅಪಘಾತ –3 ವಾಹನಗಳಾದ
ಇನೋವಾ, ಜೀಪು ಹಾಗೂ ಸ್ಕೂಟಿ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸೆ.20 ರಂದು ನಡೆದಿದೆ.

 

 

ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಇನೋವಾ ಕಾರು ಅಡ್ಕಾರು ಅಯ್ಯಪ್ಪ ಮಂದಿರದ ಬಳಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ, ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು, ಸ್ಕೂಟಿಯ ಹಿಂಬದಿಯಲ್ಲಿ ಬರುತ್ತಿದ್ದ ಜೀಪಿಗೂ ಡಿಕ್ಕಿ ಹೊಡೆದು ಮೂರೂ ವಾಹನಗಳು ಜಖಂಗೊಂಡಿದೆ.

 

 

 

ಇನೋವಾದಲ್ಲಿ ಒಟ್ಟು ನಾಲ್ವರು ಪ್ರಯಾಣಿಕರಿದ್ದು, ಜೀಪಿನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಸ್ಕೂಟಿ ಸವಾರ ಸೇರಿದಂತೆ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಲಿಲ್ಲ.

ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕೇಸು ದಾಖಲಿಸಿಕೊಂಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.

Related posts

ಬಜಪೆ ಸಮೀಪ ಎಕ್ಕಾರಿನಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ಪ್ರಯಾಣಿಕರು ಪಾರು

Upayuktha

ಅವಘಡ : ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್; 4 ಅಭಿಮಾನಿಗಳು ಸಾವು, 4 ಜನ ಗಂಭೀರ

Harshitha Harish

ಉಕ್ರೇನ್ ವಿಮಾನ ಪತನ: ಎಲ್ಲ 176 ಪ್ರಯಾಣಿಕರ ಸಾವು

Upayuktha

Leave a Comment