ಪ್ರಚಲಿತ ವಿದ್ಯಮಾನಗಳು ಲೇಖನಗಳು

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ… ಹಣದ ರಾಶಿಯ ಕಂಡು ಮಗಳ ಮೇಲಿನ ಮಮತೆಯನ್ನೂ ಕಳೆದುಕೊಂಡಳೆ ತಾಯಿ…?

(ಸತ್ಯ ಕಥೆ: ಡಾ.ಶಶಿಕಿರಣ್ ಶೆಟ್ಟಿ, ಉಡುಪಿ)

ಅಂದು ನಗರದಲ್ಲೆಲ್ಲ ಆ ಹುಡುಗಿಯದ್ದೇ ಸುದ್ದಿ.. ಪಾಪ 17 ವರ್ಷದಲ್ಲೇ, ತನ್ನ 2 ಕಿಡ್ನಿ ಕಳೆದುಕೊಂಡು ಡಯಾಲಿಸಿಸ್‌ನ ನರಕ ಯಾತನೆ ಜೊತೆಗೆ ಮುಂದೆ 2 ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಬೇಕಾದ ಪರಿಸ್ಥಿತಿ.. ತಾಯಿ ತನ್ನ ಕುಡಿಗೆ ಕಿಡ್ನಿ ಕೊಡಲು ತಯಾರಿದ್ದು ಕ್ರಾಸ್ ಮ್ಯಾಚಿಂಗ್ ಮಾಡಬೇಕಿದೆ. ಸದ್ಯ ಕಡು ಬಡತನದ ಬೇಗೆಯಲ್ಲಿ ಬೆಂದು, ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡದಿದ್ದರೆ ಹುಡುಗಿಯ ಬದುಕು ಇನ್ನಷ್ಟು ಕಷ್ಟಕರವಾಗಿತ್ತು. ಈ ಶಸ್ತ್ರ ಚಿಕಿತ್ಸೆಗೆ ಬರೋಬ್ಬರಿ 26 ಲಕ್ಷ ಹಣ ಬೇಕಿತ್ತು, ಕುಟುಂಬ ಕೆಲವೊಂದು ತಿಂಗಳಲ್ಲಿ ಡಯಾಲಿಸಿಸ್ ಮಾಡಲು ಹಣವಿಲ್ಲದೆ ಮೈಯಲ್ಲೆಲ್ಲ ನೀರು ತುಂಬಿ ವೇದನೆ ಅನುಭವಿಸುತ್ತಿದ್ದಾಳೆ. ಸಂಕಷ್ಟದಲ್ಲಿರುವ ಬಡ ಹುಡುಗಿಗೆ ಸಹಾಯ ಮಾಡಿ, ಎಂದು ಅಕೌಂಟ್ ಡೀಟೇಲ್ಸ್ ಕೊಟ್ಟಿದ್ದರು.

ಆಕೆಯ ಕಾಲೇಜಿನ ಗೆಳೆಯರಿಂದ ಹಿಡಿದು ಆಟೋ ರಿಕ್ಷಾ ಚಾಲಕರ ವರೆಗೂ ಎಲ್ಲರೂ ಆಕೆಯ ಕಷ್ಟಕ್ಕೆ ಸ್ಪಂದಿಸಿದ್ದರು, ತಮ್ಮ ಕೈಲಾದಷ್ಟು ಸಂಗ್ರಹಿಸಿ ಕೊಟ್ಟಿದ್ದರು.

ನಾವು ಕೂಡ ಮಾನವೀಯ ನೆಲೆಯಲ್ಲಿ ಒಂದಷ್ಟು ಜನರಿಂದ ಸಂಗ್ರಹಿಸಿ 1 ಲಕ್ಷದ 7 ಸಾವಿರ ಹಣ ಕೊಟ್ಟಿದ್ದೆವು. ಕೊನೆಗೆ 27 ಅಲ್ಲ ಹತ್ತಿರ ಹತ್ತಿರ 50 ಲಕ್ಷ ದಷ್ಟು ಹಣ ಸಂಗ್ರಹ ವಾಗಿತ್ತು.

ಎಲ್ಲರಿಗೂಒಂದು ರೀತಿಯ ಸಂತೃಪ್ತಿ ಒಟ್ಟಲ್ಲಿ ಹಣ ಒತ್ತಾಯಿತಲ್ಲ ಇನ್ನು ತೊಂದರೆ ಇಲ್ಲ ಎಂದು ಇದಾಗಿ 5 ತಿಂಗಳಾದರೂ..ಹುಡುಗಿಗೆ ಆಪರೇಷನ್ ಆಗಿರಲಿಲ್ಲ. ಹೀಗಿರಲೊಂದು ನಾವು ಹುಡುಗಿಯ ತಾಯಿಗೆ ಕರೆ ಮಾಡಿದ್ದೆ…

ಅಂದು 10 ಬಾರಿ ಕಾಲ್ ಮಾಡಿದರೂ, ರಿಸೀವ್ ಮಾಡಿರದ ಆಕೆ 11ನೇ ಕಾಲ್ ರಿಸೀವ್ ಮಾಡಿ ಹಲೋ ಎಂದಳು. ನೇರವಾಗಿ ನನ್ನ ಬಗ್ಗೆ ಹೇಳಿ, ಮಗುವಿನ ಬಗ್ಗೆ ಕೇಳಿದ್ದೆ. ಹಣದ ಬಗ್ಗೆ ವಿಚಾರಿಸಿದಾಗ ಆಕೆಯ ಧ್ವನಿಯ ಧಾಟಿ ಬದಲಾಗಿತ್ತು.

ನೋಡಿ ಹಣ ಸ್ವಲ್ಪ ಬಂದಿದೆ (ಅಕೌಂಟ್ ಅಲ್ಲಿ 45 ಲಕ್ಷ ದಾಟಿದ್ದು ನಮಗೆ ತಿಳಿದಿತ್ತು) ಆದರೂ ಆಪರೇಷನ್ ಮಾಡಿಸುವುದಿಲ್ಲ.. ನಾಳೆ ಆಪರೇಷನ್ ಮಾಡಿ ಮಗುವಿನ ಜೀವಕ್ಕೆ ಏನಾದರೂ ತೊಂದರೆ ಯಾದರೆ ನೀವಿದ್ದೀರಾ?… ಧಾಟಿ ಮತ್ತಷ್ಟು ಗಡುಸಾಗಿತ್ತು. ನಾನು ಕೂಲ್ ಆಗೇ ಕೇಳಿದ್ದೆ ಅಲ್ಲಮ್ಮ, ಹಣ 40 ಲಕ್ಷ ಒಟ್ಟಾಗುವ ತನಕ ನಿಮಗೆ ಇದು ತಿಳಿದಿರಲಿಲ್ಲವೇ?

ನನ್ನ ಮಾತು ಆಕೆಗೆ ಇಷ್ಟವಾದಂತೆ ತೋರಿರಲಿಲ್ಲ ನಮ್ಮ ಮಗಳು ಅವಳು ಏನು ಮಾಡಬೇಕೆಂದು ಗೊತ್ತಿದೆ; ನಿಮ್ಮ ಸಲಹೆಯ ಅವಶ್ಯಕತೆ ನಮಗಿಲ್ಲ ಎಂದವಳೇ ಫೋನ್ ದಡಕ್ಕನೆ ಇಟ್ಟಿದ್ದಳು. ಅಷ್ಟೇ ಅಲ್ಲ ಮರುಕ್ಷಣದಲ್ಲೇ ನನ್ನ ನಂಬರ್ ಬ್ಲಾಕ್ ಆಗಿತ್ತು.

ಏನೋ ನೆನಪಾಯಿತು. ಅಂದು ಆ ಹುಡುಗಿಗಾಗಿ ಆ ಒಂದು ಲಕ್ಷ ಸಂಗ್ರಹಿಸಲು ನಾವು ಪಟ್ಟ ಶ್ರಮ ಎಲ್ಲ ನೆನಪಾಗಿತ್ತು. ಮತ್ತೆ ಆ ಅಕೌಂಟ್ ಡೀಟೇಲ್ಸ್ ಪರಿಶೀಲಿಸಿದ್ದೆ. ನನ್ನ ಎಣಿಕೆಯಂತೆಯೇ ಸಾಗುತಿತ್ತು. ಹುಡುಗಿಯ ಹೆಸರಿನ ಅಕೌಂಟ್ ಇಂದ 46,07,715 ರೂ. ಹುಡುಗಿಯ ತಾಯಿಯ ಅಕೌಂಟ್ ಗೆ ಶಿಫ್ಟ್ ಆಗಿತ್ತು. ತಲೆಯಲ್ಲಿ ಹಲವು ಯೋಚನೆ ಗಳು ಬಂದಿದ್ದವು… ಆದರೂ ತಾಯಿ ಮಗಳ ಮಧ್ಯೆ ಮಾತಾಡಲು ನಾನ್ಯಾರು ಎಂದು ಸುಮ್ಮನಾದೆ. ಆದರೆ ಇದಾಗಿ ಸುಮಾರು 6 ತಿಂಗಳ ನಂತರ ಪೇಪರ್ ನಲ್ಲಿ ಆ ಹುಡುಗಿಯ ಸಾವಿನ ಸುದ್ದಿ ಓದಿದಾಗ ಮಾತ್ರ ನಿಜಕ್ಕೂ ಆಘಾತಕ್ಕೊಳಗಾಗಿದ್ದೆ. ನನ್ನ ಎಣಿಕೆ ನಿಜವಾಗಿತ್ತು…

ತಾಯಿ, ಮಗಳು, ಸಂಬಂಧ, ಮಾನವೀಯತೆ, ಕನಿಕರ ಎಲ್ಲ ಮಣ್ಣು ಪಾಲಾಗಿತ್ತು. ಅಲ್ಲಿ ಹಣ ಮಾತಾಡಿತ್ತು… ಹೆಣವೇ ಬಾಯಿ ಬಿಡುವಾಗ ಸಂಬಂಧಗಳು ಯಾವುದು ಹಣದೆದುರು ಮಾತನಾಡಿರಲಿಲ್ಲ… ಈಗ ಸುಮಾರು ಅರ್ಧ ಕೋಟಿ ಹಣ ಹುಡುಗಿಯ ತಾಯಿಯ ಅಕೌಂಟ್‌ನಲ್ಲಿತ್ತು… ಹುಡುಗಿ ಮಣ್ಣು ಪಾಲಾಗಿದ್ದಳು… ಮುಂದೆ ??? ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ…

ನಿಜ ಸ್ನೇಹಿತರೆ, ನಿಮ್ಮ ಕನಿಕರ, ಅನುಕಂಪ, ಮಾನವೀಯತೆ ಅದೆಷ್ಟೋ ಬಾರಿ ದುರುಪಯೋಗಿಸಲ್ಪಡುತ್ತದೆ. ಹಾಗಾಗಿ ಸಾಮಾಜಿಕ ಜಾಲ ತಾಣ ಗಳಲ್ಲಿ ಯಾವುದೊ ಮಗುವಿನ ಕ್ಯಾನ್ಸರ್, ಅಥವಾ ಇನ್ನಾವುದೇ ಕಾಯಿಲೆಯ ಫೋಟೋ ದೊಂದಿಗೆ ನಿಮ್ಮ ಮನಸ್ಸು ಕರಗುವ ಲೇಖನ ಓದಿ ಅಲ್ಲಿ ಕೊಟ್ಟಿರುವ ಅಕೌಂಟ್ ನಂಬರ್ ಗೋ ಗೂಗಲ್ ಪೇ , ಫೋನ್ ಪೇ ಮಾಡುವ ಮುನ್ನ 10 ಬಾರಿ ಯೋಚಿಸಿ. ಯಾಕೆಂದರೆ ಅಲ್ಲಿ ಮಗು ಯಾರದ್ದೋ ಇದ್ದು ಅಕೌಂಟ್ ನಂಬರ್ ಇನ್ಯಾರದ್ದೋ ಇರಬಹುದು; ಇಲ್ಲ ಗೂಗಲ್ ಪೇ, ಫೋನ್‌ ಪೇ ನಂಬರ್ ಇನ್ಯಾರದ್ದೋ ಇರಬಹುದು, ಹಾಗಾಗಿ ಸಾಧ್ಯವಾದರೆ ರೋಗಿಯನ್ನು ಮೀಟ್ ಆಗಿ, ಅವನ ನಿಜ ಸ್ಥಿತಿ ಅರಿತು ಡೊನೇಟ್ ಮಾಡಿ… ಇಲ್ಲ ಕೆಲವು ಪ್ರಾಮಾಣಿಕ ಸಂಸ್ಥೆಗಳು (ರೋಗಿ ಯಾ ವಿವರ ನೋಡಿ ಪರಿಶೀಲಿಸಿ ಡೊನೇಟ್ ಮಾಡುವ) ಪ್ರಾಮಾಣಿಕ (ಸಂಸ್ಥೆಯ ಬ್ಯಾಕ್ ಗ್ರೌಂಡ್ ಚೆಕ್ ಮಾಡಿ) ಸಂಸ್ಥೆಗಳ ಮೂಲಕ ಡೊನೇಟ್ ಮಾಡಿ ಇಲ್ಲದಿದ್ದರೆ ನಿಮ್ಮ ಹಣ ಮತ್ತೆ ಯಾರದ್ದೋ ಹಣ, ಎಲ್ಲಮ್ಮನ ಜಾತ್ರೆ ಆಗಲಿದೆ ಎಚ್ಚರ..

-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಮಾಜ ಸೇವೆಗೆ ಹೆಸರುವಾಸಿ ಕುದ್ಮಾರಿನ ತಿರಂಗಾ ವಾರಿಯರ್ಸ್ ತಂಡ

Upayuktha

ದೇವಸ್ಥಾನ, ದೈವಸ್ಥಾನ, ಚಾವಡಿ, ಮನೆ ಹೆಸರನ್ನು ತುಳುವಿನಲ್ಲಿ ಬರೆಯೋಣ…

Upayuktha

ಕೃತಕ ಕಾಲಿನಿಂದಲೇ ಧೀಂಗಿಣ: ಮನಸೂರೆಗೊಳ್ಳುವ ಹವ್ಯಾಸಿ ಯಕ್ಷಗಾನ ಕಲಾವಿದ ಮನೋಜ್ ಕುಮಾರ್

Upayuktha