ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಉಡುಪಿ: ಸೋದೆ ವಾದಿರಾಜ ಮಠದಲ್ಲಿ ಶ್ರೀ ವಿಶ್ವೇಂದ್ರ ತೀರ್ಥರ ಆರಾಧನಾ ಉತ್ಸವ

ಉಡುಪಿ: ಕನ್ಯಾ ಮಾಸದ ನವಮೀ ತಿಥಿ, ಶ್ರೀವಿಶ್ವೋತ್ತಮ ತೀರ್ಥರಂತಹ ಯತಿ ಶ್ರೇಷ್ಠರನ್ನು ಶಿಷ್ಯರನ್ನಾಗಿ ಪಡೆದ ಪರಮಪೂಜ್ಯ ಶ್ರೀವಿಶ್ವೇಂದ್ರ ತೀರ್ಥರ ಆರಾಧನಾ ಪ್ರಯುಕ್ತ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಅವರ ಮೂಲವೃಂದಾವನವಿರುವ ಉದ್ಯಾವರ ಸೋದೆ ವಾದಿರಾಜ ಮಠದಲ್ಲಿ ಆರಾಧನಾ ಧಾರ್ಮಿಕ ಕಾರ್ಯಕ್ರಮಗಳನ್ನು ವೈಭವದಿಂದ ನೆರವೇರಿಸಿದರು.

ಶ್ರೀವಿಶ್ವೇಂದ್ರ ತೀರ್ಥರ ಸಾಧನೆಗಳು:
⚫️ ಶ್ರೀಯುಕ್ತಿಮಲ್ಲಿಕಾ ಪ್ರಕಾಶಿನೀ ಸಭಾ ಎಂಬ ಹೆಸರಿನಲ್ಲಿ ಪ್ರತಿವರ್ಷ ವಿದ್ವದ್ಗೋಷ್ಠಿ.
⚫️ ಅನೇಕ ಶ್ರೀ ವಾದಿರಾಜರ ಕೃತಿಗಳ ಪ್ರಕಾಶನ.
⚫️ ರಾಜೇಶ ಹಯಮುಖ ಅಂಕಿತದಲ್ಲಿ ಅನೇಕ ಕನ್ನಡ ಕೀರ್ತನೆಗಳು.
⚫️ 1943ರಲ್ಲಿ ಸ್ವಾತಂತ್ರ ಪೂರ್ವದಲ್ಲಿ ಇನ್ನಂಜೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶ್ರೀವಿಷ್ಣುಮೂರ್ತಿ ಹಯವದನ ಸ್ವಾಮಿ ಸನಿವಾಸ ಪ್ರೌಢ ಶಾಲೆಯ ಆರಂಭ.
⚫️ ಶ್ರೀಗಳವರು ಆಯುರ್ವೇದವನ್ನು ಬಲ್ಲವರಾಗಿದ್ದು ಅನೇಕರ ರೋಗಗಳನ್ನು ಪರಿಹರಿಸಿದ್ದಾರೆ. ಶ್ರೀಗಳವರು ತಯಾರಿಸುತ್ತಿದ್ದ ಹಯಗ್ರೀವ ತೈಲ ಎಂಬ ನೋವಿನ ಎಣ್ಣೆಯನ್ನು ಈಗಲೂ ಶ್ರೀಮಠದಲ್ಲಿ ಮುಂದುವರೆದಿಕೊಂಡು ಬರುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಟೀಲು ದೇವಾಲಯದ 17 ಸಿಬ್ಬಂದಿಗೆ ಕೊರೊನಾ ಪಾಸಿಟಿವ್

Harshitha Harish

ದ. ಕನ್ನಡ ಜಿಲ್ಲಾಧಿಕಾರಿ ಡಾl ಕೆ.ವಿ. ರಾಜೇಂದ್ರ ಅವರಿಗೂ ಕೋವಿಡ್ ಪಾಸಿಟಿವ್

Harshitha Harish

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಪ್ಪನಾಡು

Upayuktha

Leave a Comment