ಅಪರಾಧ ಜಿಲ್ಲಾ ಸುದ್ದಿಗಳು

ಕೃಷಿ ಅಧಿಕಾರಿ ಮನೆಗೆ ಎಸಿಬಿ ದಾಳಿ; ಅಪಾರ ಪ್ರಮಾಣದ ಚಿನ್ನ ಮತ್ತು ನಗದು ಪತ್ತೆ

ಕಲಬುರಗಿ: ಜೇವರ್ಗಿ ಕೃಷಿ ಇಲಾಖೆ ಅಧಿಕಾರಿಯ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಮಯದಲ್ಲಿ ತುಂಬಾ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.

ಇವರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಕಲಬುರ್ಗಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೃಷಿ ಅಧಿಕಾರಿ ಮನೆಯಲ್ಲಿ 9 ಲಕ್ಷ ರೂ. ನಗದು ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ.

ಕೃಷಿ ಅಧಿಕಾರಿಯಾದ ಸುನಿಲ್ ಕುಮಾರ್ ಮಂಗಳವಾರ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.

ಹೀಗಾಗಿ ಕಲಬುರಗಿಯಲ್ಲಿನ ಆತನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆದಿದೆ. ತಪಾಸಣೆ ವೇಳೆಗೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಆಸ್ತಿಯ ದಾಖಲೆ ಪತ್ತೆಯಾಗಿದೆ. ಎಸಿಬಿ ಎಸ್.ಪಿ.ಮಹೇಶ್ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಈ ಬಗ್ಗೆ ವರದಿಯಾಗಿದೆ.

Related posts

ಆಗಸ್ಟ್ 6 ರಿಂದ 13: ತುಳು ಅಕಾಡೆಮಿ ಚಾವಡಿಯಲ್ಲಿ ಪ್ರವಚನ ಸಪ್ತಾಹ

Upayuktha

ಬಿಜೆಪಿ ರಾಜ್ಯಾಧ್ಯಕ್ಷ ಕೋವಿಡ್ ನಿಂದ ಗುಣಮುಖ

Harshitha Harish

ಕ್ವಾರೆಂಟೈನ್ ಉಲ್ಲಂಘನೆ: ದ.ಕ ಜಿಲ್ಲೆಯಲ್ಲಿ 54 ಪ್ರಕರಣ ದಾಖಲು

Upayuktha

Leave a Comment

error: Copying Content is Prohibited !!