ಅಪರಾಧ ಗ್ರಾಮಾಂತರ ಸ್ಥಳೀಯ

ವಿಟ್ಲ: ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ವಿಟ್ಲ: ಹಲವು ಪೊಲೀಸ್ ಠಾಣೆಗಳಿಗೆ ಬೇಕಾದ, ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೊಡುಂಗಾಯಿ ನಿವಾಸಿ ಮಹಮ್ಮದ್ ಹನೀಫ್ ಯಾನೆ ಹನೀಫ್ ಯಾನೆ ಎಲಿ ಹನೀಫ್ (46) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದ ತನಿಖೆಗೆ ಹಾಜರಾಗದೆ ತಲೆ ಮರೆಸಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ವಿಟ್ಲ ಠಾಣೆಯಲ್ಲಿ ಎರಡು ವರ್ಷದ ಹಿಂದೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕವೂ ತಲೆ ಮರೆಸಿಕೊಂಡಿದ್ದಾತನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಬಂಧಿಸಿದೆ.

ಗದಗ, ಶಿವಮೊಗ್ಗ, ಚಿಕ್ಕಮಂಗಳೂರು, ಮೂಡಿಗೆರೆ, ಬೆಂಗಳೂರು ಸುಬ್ರಹ್ಮಣ್ಯಪುರಂ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಗಳಲ್ಲಿ ಕಳ್ಳತನ, ರೋಬರಿ, ಹನಿಟ್ರಾಪ್, ವಂಚನೆ ಸೇರಿ ಹಲವು ಪ್ರಕರಣಗಳು ಈತಮೇಲೆ ದಾಖಲಾಗಿತ್ತು. ಯಾವ ಠಾಣೆಗೂ ತನಿಖೆಗೆ ಹಾಜರಾಗದ ಹಿನ್ನಲೆಯಲ್ಲಿ ಈತನ ಮೇಲೆ ನ್ಯಾಯಾಲಯದಿಂದ ವಾರೆಂಟ್ ಆಗಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್‍ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಎಸ್ ಐ ವಿನೋದ್ ರೆಡ್ಡಿ ಅವರ ಸೂಚನೆಯಂತೆ ಸಿಬ್ಬಂದಿಗಳಾದ ಪ್ರತಾಪ ರೆಡ್ಡಿ, ಜಯಕುಮಾರ್, ವಿನಾಯಕ ಅವರ ತಂಡ ಕಾರ್ಯಾಚರಣೆ ನಡೆಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಜಾಲ ತಾಣಗಳ ಮೂಲಕ ಸಾಹಿತ್ಯಕ್ಕೆ ಚಟುವಟಿಕೆಗಳು ಈಗ ಅನಿವಾರ್ಯ: ಡಾ. ಸುರೇಶ ನೆಗಳಗುಳಿ

Upayuktha

ಯುವಕರಲ್ಲಿ ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ: ಹರೀಶ್ ಪೂಂಜ

Sushmitha Jain

ಕೊರೊನಾ ಅಪ್‌ಡೇಟ್ಸ್‌: ಉಡುಪಿಯಲ್ಲಿ 15, ರಾಜ್ಯದಲ್ಲಿ 178 ಪಾಸಿಟಿವ್ ಪ್ರಕರಣ

Upayuktha