ನಗರ ಸ್ಥಳೀಯ

ಮೈಸೂರು: ಹಿಮಾಲಯ ಫೌಂಡೇಷನ್‍ನ ವತಿಯಿಂದ ಆಚಾರ್ಯ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಮೈಸೂರು: ಹಿಮಾಲಯ ಫೌಂಡೇಷನ್ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಚಾರ್ಯ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರಿನ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಿತ್ತು.

ಅರ್ಕಧಾಮ ಸಂಸ್ಥಾಪಕ ಯೋಗಿ ಶ್ರೀನಿವಾಸ ಅರ್ಕ ಕಾರ್ಯಕ್ರಮ ಉದ್ಘಾಟಿಸಿದರು, ಹಿರಿಯ ಸಾಹಿತಿ ಡಾ.ಸಿ.ಪಿ.ಕೆ. ಆಚಾರ್ಯ ವಿದ್ಯಾರಣ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಹಿರಿಯ ಸಮಾಜ ಸೇವಕ– ಗಾಂಧಿ ಸ್ಮೃತಿ ಪ್ರಶಸ್ತಿ ಪುರಸ್ಕೃತ ಡಾ. ಕೆ. ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಮೃತಿ ಚಿಂತಕ- ಅಧ್ಯಾತ್ಮ ಪ್ರಭೂಷಣ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಮ್ಮುಖದಲ್ಲಿ ಈ ಸಾಲಿನ ಪ್ರತಿಷ್ಠಿತ ಆಚಾರ್ಯ ವಿದ್ಯಾರಣ್ಯ ಪ್ರಶಸ್ತಿಯನ್ನು ನಾಡಿನ ಗಣ್ಯ ಸಾಧಕರುಗಳಾದ ಬೆಂಗಳೂರಿನ ಖ್ಯಾತ ಕಾದಂಬರಿಕಾರ ಡಾ. ಕೆ.ರಮಾನಂದ (ಸಾಹಿತ್ಯ ಮತ್ತು ಸಂಶೋಧನೆ), ವೈದೇಹಿ ಅಯ್ಯಂಗಾರ್(ಧಾರ್ಮಿಕ), ಶ್ರೀಹರಿ ದ್ವಾರಕಾನಾಥ್ ಗುರೂಜಿ (ಯೋಗ), ಡಾ.ಬಿ.ಆರ್.ಪೈ (ಉದ್ಯಮ ಮತ್ತು ಸಮಾಜ ಸೇವೆ), ಕೆ.ರಘುನಂದನ್ (ವಾಣಿಜ್ಯ), ಎಂ.ಎನ್ ದೊರೆಸ್ವಾಮಿ (ಉದ್ಯಮ) ಡಾ.ಟಿ.ಎನ್.ಶಶಿಕುಮಾರ್ (ಅಧ್ಯಾತ್ಮ), ಗಿರೀಶ್ (ಸಮಾಜ ಸೇವೆ) ರವರುಗಳಿಗೆ ಆಚಾರ್ಯ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಸಾಹಿತಿ ಪ್ರೋ.ಕೆ.ಭೈರವ ಮೂರ್ತಿ, ದಾಸ್ತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ತಿಮ್ಮಯ್ಯ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಮಡ್ಡೀಕೇರಿ ಗೋಪಾಲ್ ಮತ್ತು ಫೌಂಡೇಷನ್ ಅಧ್ಯಕ್ಷ ಎನ್. ಅನಂತ ದೀಕ್ಷಿತ್ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಡುಪಿ: ವಾರಸುದಾರರು ಇಲ್ಲದ ಎರಡು ಶವಗಳ ಅಂತ್ಯಸಂಸ್ಕಾರ

Upayuktha

ಎಸ್‌ಡಿಎಂ ಕಾಲೇಜಿನಲ್ಲಿ ಎನ್ನೆಸ್ಸೆಸ್‌ ವತಿಯಿಂದ ಜಾಗೃತಿ ಕಾರ್ಯಾಗಾರ

Upayuktha

ಸನ್ಮಾನದಿಂದ ಜವಾಬ್ದಾರಿ ಹೆಚ್ಚುತ್ತದೆ: ಡಾ || ಚೂಂತಾರು

Upayuktha