ಮಂಗಳೂರು: ತುಳುನಾಡಿನ ಅತ್ಯಂತ ಕಾರ್ಣಿಕ ಹಾಗೂ ಪ್ರಸಿದ್ಧ ದೈವಗಳಲ್ಲಿ ಒಂದಾದ ಸ್ವಾಮಿ ಕೊರಗಜ್ಜನ ದರ್ಶನ ಪಡೆದಿದ್ದ ಖ್ಯಾತ ಕನ್ನಡ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋ ಈಗ ವೈರಲ್ ಆಗಿದೆ. ಮಂಗಳೂರಿನಿಂದ ಕೊಣಾಜೆಗೆ ಹೋಗುವ ಮಾರ್ಗದ ಮಧ್ಯೆ ಸಿಗುವ ಕುತ್ತಾರಿನಲ್ಲಿ ಈ ಕ್ಷೇತ್ರವಿದೆ.
ಸುಮಾರು ಎರಡು ವರ್ಷಗಳ ಹಿಂದೆ ಮಂಗಳೂರಿಗೆ ಭೇಟಿ ಮಾಡಿದ್ದ ನಟ ದರ್ಶನ್, ಕೊರಗಜ್ಜನ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದರು. ಆಗ ಕೊರಗಜ್ಜನ ಮುಂದೆ ಕೈ ಮುಗಿಯುತ್ತಾ ನಿಂತಿದ್ದ ನಟ ದರ್ಶನ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ದರ್ಶನ್ ಅವರು ತನ್ನ ಸ್ನೇಹಿತರೊಂದಿಗೆ ಮಂಗಳೂರಿಗೆ ಭೇಟಿ ಕೊಟ್ಟಿದ್ದರು. ಈ ಮೊದಲೇ ತಮ್ಮ ಸ್ನೇಹಿತರ ಮೂಲಕ ಕೊರಗಜ್ಜನ ಪವಾಡ ಅರಿತಿದ್ದ ದರ್ಶನ್, ಇದೇ ಸಂದರ್ಭದಲ್ಲಿ ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ದರ್ಶನ ಪಡೆದುಕೊಂಡಿದ್ದರು. ಅಭಿಮಾನಿ ಗಳಿಗೆ ಸಂತಸ ತಂದಿದೆ.