ಅಪರಾಧ ದೇಶ-ವಿದೇಶ

ಮತ್ತೆ ನಟ ದೀಪ್ ಸಿಧು ಬಂಧನ

ನವದೆಹಲಿ: ಕೆಂಪು ಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಸಂಬಂಧಿಸಿ ದೆಹಲಿ ನ್ಯಾಯಾಲಯದಿಂದ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ, ದೆಹಲಿ ಪೊಲೀಸರು ಮತ್ತೆ ನಟ ದೀಪ್ ಸಿಧು ಅವರನ್ನು ಬಂಧಿಸಿದ್ದಾರೆ.

ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿ ನಟ ದೀಪ್ ಸಿಧು ಬಂಧನವಾಗಿದೆ.

ಪ್ರತಿಭಟನೆ ವೇಳೆ ಪಾರಂಪರಿಕ ಕಟ್ಟಡದ ಕೆಲವು ಭಾಗಗಳು ಗೋಡೆಗಳು ಹಾನಿಗೊಳಗಾಗಿದೆ ಎಂದು ಎಎಸ್ಐ ಎಫ್‌ಐಆರ್‌ ದಾಖಲಿಸಿದೆ.

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಟ್ರಾಕ್ಟರ್ ಮೆರವಣಿಗೆಯ ವೇಳೆ ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿ ಫೆಬ್ರವರಿ 9 ರಂದು ಬಂಧಿಸಲ್ಪಟ್ಟಿದ್ದ ದೀಪ್ ಸಿಧುಗೆ ದೆಹಲಿಯ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತ್ತು.

ಶನಿವಾರ ಬೆಳಿಗ್ಗೆ ಜಾಮೀನು ದೊರೆತಿದ್ದು, ಭಾರತೀಯ ಪುರಾತತ್ವ ಇಲಾಖೆ ದಾಖಲಿಸಿದ್ದ ಪ್ರಕರಣದ ಆಧಾರದಲ್ಲಿ ದೀಪ್ ಸಿಧು ಅವರನ್ನು ಮತ್ತೆ ಬಂಧಿಸಲಾಗಿದೆ.

Related posts

ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆಯಿಲ್ಲ

Harshitha Harish

ವೈರಲ್ ವೀಡಿಯೋ: ಕೋವಿಡ್ ವಾರಿಯರ್‌ಗಳ ಬಗ್ಗೆ ಕೇಜ್ರಿ ಸರಕಾರದ ಅಸಡ್ಡೆ: ಕಣ್ಣೀರಿಟ್ಟ ಅಂಬೇಡ್ಕರ್ ಆಸ್ಪತ್ರೆ ಸಿಬ್ಬಂದಿಗಳು

Upayuktha

ಐತಿಹಾಸಿಕ ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ- ಲೈವ್

Upayuktha