ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ನಟ ,ನಿರ್ದೇಶಕ ,ನಿರ್ಮಾಪಕ ರಾದ ದಿನೇಶ್ ಗಾಂಧಿ ನಿಧನ

ಬೆಂಗಳೂರು : ನಟ, ನಿರ್ದೇಶಕ, ನಿರ್ಮಾಪಕರಾದ ದಿನೇಶ್ ಗಾಂಧಿ (52) ವರ್ಷ ವಯಸ್ಸಿನವರಾಗಿದ್ದು, ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಪುತ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಸ್ವಗ್ರಾಮ ಶ್ರೀರಂಗಪಟ್ಟಣದ ನಗುವಿನಹಳ್ಳಿಯಲ್ಲಿ ನಡೆಯುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಸುದೀಪ್ ಅಭಿನಯದ ವೀರ ಮದಕರಿ, ರವಿಚಂದ್ರನ್ ಅಭಿನಯದ ಅವರ ಮಲ್ಲಿಕಾರ್ಜುನ ಚಿತ್ರಗಳನ್ನು ನಿರ್ಮಿಸಿದ್ದರು.

ಹಾಗೆ ನಿರ್ದೇಶಕರಾಗಿಯೂ ದುಡಿದಿದ್ದ ಅವರು ನಟ ಸಿದ್ಧಾಂತ್ ಅಭಿನಯದ ಛತ್ರಪತಿ ಚಿತ್ರವನ್ನು ನಿರ್ದೇಶಿಸಿದ್ದರು. ಇವರ ನಿಧನಕ್ಕೆ ಸಿನಿಮಾ ನಟ-ನಟಿಯರು, ತಂತ್ರಜ್ಞರು, ಚಿತ್ರೋದ್ಯಮದ ಗಣ್ಯರು ಬೇಸರ ವ್ಯಕ್ತಪಡಿಸಿದರು.

ಹಾಗೆಯೇ ಕಿಚ್ಚ ಸುದೀಪ್ ರವರ ಅಭಿನಯದ ವೀರ ಮದಕರಿ ಸಿನಿಮಾದಲ್ಲೂ ಅಭಿನಯ ಕೂಡ ಮಾಡಿದ್ದರು.

ಈಗಾಗಲೇ ಮಕ್ಕಳ ಸಿನಿಮಾವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದರು.

Related posts

ನಿಧನ/ ಇಂದಿರಾ ಐತಾಳ

Upayuktha

ಗಣಿತ ಪ್ರಾಧ್ಯಾಪಕ, ಯಕ್ಷ ಕಲಾವಿದ ಪ್ರೊ. ಕೆರೆಮನೆ ರಾಮ ಹೆಗಡೆ ನಿಧನ

Upayuktha

ಕರ್ಣಾಟಕ ಬ್ಯಾಂಕ್ ನಿವೃತ್ತ ಚೇರ್‌ಮನ್ ಅನಂತಕೃಷ್ಣ ನಿಧನ

Upayuktha

Leave a Comment