ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಇಂದು ಮಂಗಳವಾರ ತಮ್ಮ ನಿವಾಸದಲ್ಲಿ ಬೆಳ್ಳಿ ಗದೆ ನೀಡಿ ಗೌರವಿಸಿದರು.
ಈಗಾಗಲೇ ಇವರು ತಾಲ್ಲೂಕಿನ ಕಮಲಾಪುರ, ಹಂಪಿ, ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ‘ಜೇಮ್ಸ್’ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದಾರೆ. ಹಾಗೆಯೇ ಒಂದು ವಾರದಿಂದ ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಚಿತ್ರತಂಡವೂ ಇಲ್ಲಿಯೇ ನೆಲೆ ನಿಂತಿದ್ದರು.
ಮಂಗಳವಾರ ದಂದು ಬೆಳಿಗ್ಗೆ ಸಚಿವ ಆನಂದ್ ಸಿಂಗ್ ಅವರ ಬಂಗ್ಲೆಗೆ ಬಂದಿದ್ದ ಪುನೀತ್ ರಾಜ್ಕುಮಾರ್ ಅವರನ್ನು ಸಚಿವರ ಕುಟುಂಬದವರು ಬರಮಾಡಿಕೊಂಡರು.
ಹಾಗೆಯೇ ನಟ ಪುನೀತ್ ಉಪಾಹಾರ ಸೇವಿಸಿ, ಕೆಲ ಹೊತ್ತು ಮಾತುಕತೆ ನಡೆಸಿ ತೆರಳಿದರು. ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ಪ್ರಚಾರದ ನಿಮಿತ್ತವಾಗಿ ನಗರಕ್ಕೆ ಬಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಜೊತೆ ಇದ್ದರು.