ಕಿರುತೆರೆ- ಟಿವಿ ಚಂದನವನ- ಸ್ಯಾಂಡಲ್‌ವುಡ್

ಹಿಂದಿ ಆಲ್ಬಂ ಸಾಂಗ್ ಲೋಕದಲ್ಲಿ ನಟ ಶೈನ್ ಶೆಟ್ಟಿ

ಬೆಂಗಳೂರು : ನಟ ಮತ್ತು ಕಿರುತೆರೆ ಸ್ಟಾರ್ ಶೈನ್ ಶೆಟ್ಟಿ ಸಿಹಿ ಸುದ್ದಿ ನೀಡುತ್ತಿದ್ದಾರೆ. ಕಳೆದ ವರ್ಷ ಇದೆ ಸಮಯದಲ್ಲಿ ಬಿಗ್ ಬಾಸ್ ಸೀಸನ್ 7 ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದರು. ಈ ಅದ್ಭುತ ಕ್ಷಣಕ್ಕೆ ಈಗ ಒಂದು ವರ್ಷದ ಸಂಭ್ರಮ. .

ಶೈನ್ ಸಿನಿಮಾಗಳ ಜೊತೆ ಹಿಂದಿ ಆಲ್ಬಂ ಸಾಂಗ್ ಲೋಕಕ್ಕೆ ಕಾಲಿಡುತ್ತಿದ್ದಾರೆ. ಇದೊಂದು ಬಿಗ್ ಬಾಸ್ ಗೆದ್ದ ಒಂದು ವರ್ಷದ ಸಂಭ್ರಮವನ್ನು ಶೈನ್ ಗೆ ಮತ್ತಷ್ಟು ಹೆಚ್ಚಿಸಿದೆ. ಶೈನ್ ಬಾಲಿವುಡ್ ಕಡೆ ಹೊರಟಿರುವುದು ಆಲ್ಬಂ ಹಾಡಿಗಾಗಿ.

ಶೈನ್ ಶೆಟ್ಟಿ ಹಿಂದಿ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡನ್ನು ಸಂಚಿತ್ ಹೆಗ್ಡೆ ಹಾಡುತ್ತಿದ್ದಾರೆ. ಹಾಡಿಗೆ ಧೂಂಡೆ ಎಂದು ಟೈಟಲ್ ಇಡಲಾಗಿದೆ. ‘ಪಯಣದ ಹಾಡಾಗಿದ್ದು, ನಾಯಕ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುತ್ತಾ ಹೊಸ ಜೀವನವನ್ನು ನೋಡುತ್ತಿರುತ್ತಾನೆ. ಇದೊಂದು ಫ್ಯಾಂಟಸಿ ಪ್ರಯಾಣ ಕಥೆಯಾಗಿದೆ’

ಈ ಹಾಡನ್ನು ಯತೀಶ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿಗೆ ಡ್ಯಾನಿ ಕುರಿಯನ್ ಮತ್ತು ಸುಮಿತ್ ಬಂಗೇರಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನಲ್ಲಿ ಒಂದು ಕಾಲ್ಪನಿಕ ಹಳ್ಳಿಯ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಶೈನ್ ಶೆಟ್ಟಿ ಬ್ಯಾಗ್ ಡ್ರಾಪ್ ಇರಲಿದ್ದು, ಹಿಮಾಚಲ ಪ್ರದೇಶದ ಕಿನೌರ್ ಎನ್ನುವ ಹಳ್ಳಿಯನ್ನು ಸ್ಥಾಪಿಸಲಾಗಿದೆಯಂತೆ.

ಶೈನ್ ಶೆಟ್ಟಿಯ ಕನಸಿನ ಪ್ರಾಜೆಕ್ಟ್ ಮಾರ್ಚ್ ತಿಂಗಳಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ತಿಳಿದುಬರುತ್ತಿದೆ. ಒಟ್ಟು 10 ದಿನಗಳ ಕಾಲ ಶೂಟಿಂಗ್ ನಡೆಯಲಿದೆಯಂತೆ.

 

Related posts

ಮಂಗಳೂರು: ವಿಕಲಚೇತನ ಬಾಲಕಿಗೆ ನೆರವಾದ ಕಿಚ್ಚ ಸುದೀಪ್

Harshitha Harish

ಸವಿ ನೆನಪು: ಹಿರಿಯ ನಟ ಅದ್ವಿತೀಯ ಕಲಾವಿದ, ‘ಚಾಮಯ್ಯ ಮೇಷ್ಟ್ರು’ ಕೆಎಸ್ ಅಶ್ವಥ್ ಜನ್ಮದಿನ ಇಂದು

Upayuktha

ಬ್ರಹ್ಮಗಂಟು ಧಾರಾವಾಹಿ ಗೀತಾ ಭಾರತಿ ಭಟ್ ಮತ್ತು ಅಭಿಷೇಕ್ ಸಿಸಿಬಿ ವಿಚಾರಣೆ

Harshitha Harish