ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ಆರೋಗ್ಯ ಸಮಸ್ಯೆ ಯಿಂದ ನಟ ವಿಜಯಕಾಂತ್ ಆಸ್ಪತ್ರೆ ದಾಖಲು

ಚೆನ್ನೈ: ತಮಿಳು ಚಿತ್ರರಂಗದ ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷರಾಗಿರುವ ವಿಜಯಕಾಂತ್ ಅವರು ಮಂಗಳವಾರ ರಾತ್ರಿ ಚೆನ್ನೈನ ಎಂಐಒಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ಬಂದಿದೆ.

ವೈದ್ಯಕೀಯ ತಪಾಸಣೆ ಮಾಡಲು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ವಿಜಯ್ ಕಾಂತ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಅವರನ್ನು ಬಿಡುಗಡೆ ಮಾಡಲಾಗುವುದು ಅಂತಲೂ ಎಂಐಒಟಿ ಆಸ್ಪತ್ರೆ ತಕ್ಷಣದ ಮಾಹಿತಿ ನೀಡಿದೆ.


ಸೆ. 22 ರಂದು ಕೊರೊನಾ ಸೋಂಕು ತಗುಲಿ ವಿಜಯಕಾಂತ್ ಹಾಗೂ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಕೂಡ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ನಂತರ ಅ. 2ರಂದು ಚೇತರಿಸಿಕೊಂಡು ಮನೆಗೆ ತೆರಳಿದ್ದರು.

ಇಬ್ಬರಿಗೂ ಟೆಸ್ಟ್ ಮಾಡಿಸಿ ವರದಿ ಮತ್ತೊಮ್ಮೆ ನೆಗಟಿವ್ ಬರುವ ತನಕ ಅವರನ್ನು ಐಸೋಲೇಷನ್ ನಲ್ಲಿರಲು ವೈದ್ಯರು ಸೂಚನೆ ನೀಡಿದರು.

ಆದರೆ ಇದೀಗ ಮತ್ತೆ ವಿಜಯಕಾಂತ್ ಅಸ್ವಸ್ಥ ಗೊಂಡಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಚಿಕಿತ್ಸೆ ಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲ ತಿಳಿಸಿದೆ.

Related posts

ಅಮಿತಾಬ್ ಬಚ್ಚನ್ ಅವರ ಜೊತೆ “ಮೇಡೆ” ಚಿತ್ರದ ಕೆಲಸ ಮಾಡಲಿರುವ ಬಾಲಿವುಡ್ ನಟ ಅಜಯ್ ದೇವ್ ಗನ್

Harshitha Harish

ಕಿರುತೆರೆ ನಟಿ ವಿ ಜೆ ಚಿತ್ರಾ ಸಾವು

Harshitha Harish

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ 31ಕ್ಕೆ ಏರಿಕೆ

Upayuktha