ದೇಶ-ವಿದೇಶ

ಮುಂಬೈ ಯಲ್ಲಿ ಇಂದು ನಟಿ ಕಾಜಲ್ ಮದುವೆ ಸಂಭ್ರಮ

ಮುಂಬೈ: ಉದ್ಯಮಿ ಗೌತಮ್ ಕಿಚ್ಲು ಜೊತೆ ನಟಿ ಕಾಜಲ್ ಅಗರ್ವಾಲ್ ವಿವಾಹ ಮುಂಬೈಯಲ್ಲಿ ನೆರವೇರಿತು.

ತಮ್ಮ ಹತ್ತಿರದ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ಜೋಡಿ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಸಿನಿಮಾ ನಟ ನಟಿಯರಿಂದ ವಿವಾಹವಾಗುವ ನವ ದಂಪತಿಗಳಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂತು.

ಕಾಜಲ್ ಅಗರ್ವಾಲ್ ಕಡುಗೆಂಪು ಬಣ್ಣದ ಲೆಹ್ಹಾಂಗ ತೊಟ್ಟು ವಧುವಿನ ಉಡುಗೆಯಲ್ಲಿ ಕಂಗೊಳಿಸಿದ್ದರು.

ಹಾಗೆಯೇ ಮದುಮಗ ತಿಳಿ ಗುಲಾಬಿ ಬಣ್ಣದ  ದುಪ್ಪಟ್ಟಾ ಹಾಗೂ ಗುಲಾಬಿ ಅಚ್ಚೊತ್ತಿದ ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಗೌತಮ್ ಮಿಂಚಿದ್ದರು.

ಇವರು ನಟಿಸಿದ ಸಿಂಗಂ, ಮಗದೀರ, ಸ್ಪೆಷಲ್ 26, ತುಪ್ಪಕ್ಕಿ ಚಿತ್ರಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಅವರು ಕಳೆದ ಅಕ್ಟೋಬರ್ 6 ರಂದು ಗೌತಮ್ ಜೊತೆ ತಮ್ಮ ವಿವಾಹ ನಿಶ್ಚಯ ಮಾಡಿಕೊಂಡಿದ್ದರು. ಇಂದು ಎರಡು ಜೋಡಿ ಗೆ ವಿವಾಹವಾಯಿತು.

 

Related posts

ಯುಇಎಫ್ಎ ವರ್ಷದ ಆಟಗಾರ ಪ್ರಶಸ್ತಿ ಗೆದ್ದ ರಾಬರ್ಟ್ ಲೆವಾಂಡೋವ್ಸ್ಕಿ

Upayuktha

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ: ಮಕರ ಸಂಕ್ರಾಂತಿಗೆ ನಿರ್ಮಾಣ ಕಾರ್ಯ ಆರಂಭ ನಿರೀಕ್ಷೆ

Upayuktha

ಪಂಜಾಬಿ ಸಾಹಿತಿ ಅಮೃತಾ ಪ್ರೀತಂ ಜನ್ಮ ಶತಮಾನೋತ್ಸವಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್‌

Upayuktha

Leave a Comment