ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ನಟಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಮೇಲ್ಮರವತ್ತೂರ್: ತಮಿಳುನಾಡು ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಬುಧವಾರ ಮೇಲ್ಮರವತ್ತೂರ್’ನಲ್ಲಿ ನಡೆದಿದೆ.

ಕಾರಿನ ಎದುರಿಗೆ ಬಂದ ಟ್ಯಾಂಕರ್ ಒಂದು ಖುಷ್ಬೂ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ನಟಿ ಖುಷ್ಬೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ.

ಅವರು ಕಡಲೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮೇಲ್ ಮರವತ್ತೂರ್ ಸಮೀಪ ಅಪಘಾತ ಸಂಭವಿಸಿದೆ.

ಘಟನೆ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಖುಷ್ಬೂ ಅವರು, ನಿಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನಾನು ಪ್ರಯಾಣಿಸುತ್ತಿದ್ದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನನ್ನ ಪತಿ ನಂಬಿರುವ ದೇವರು ಮುರುಗನ್ ನಮ್ಮನ್ನು ಬದುಕಿಸಿದ ಎಂದು ಈ ಬಗ್ಗೆ ಹೇಳಿಕೊಂಡಿದ್ದಾರೆ.

ನಮ್ಮ ಕಾರು ಸರಿಯಾದ ಮಾರ್ಗದಲ್ಲಿಯೇ ಸಾಗುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆಯಿತು ಎಂದು ತಿಳಿಸಿದ್ದಾರೆ.

Related posts

ನೆಲ್ಸನ್‌ ಮಂಡೇಲಾ ರ ವೈಯಕ್ತಿಕ ವೈದ್ಯ ನಿಧನ

Harshitha Harish

ದಂಗೆಕೋರರ ಆಸ್ತಿ ಮುಟ್ಟುಗೋಲು: ಯೋಗಿ ಸರಕಾರದ ದಿಟ್ಟ ಕ್ರಮ

Upayuktha

ಏನಿದು ಐಎನ್‌ಎಕ್ಸ್ ಮೀಡಿಯಾ ಹಗರಣ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…

Upayuktha

Leave a Comment