ಕಿರುತೆರೆ- ಟಿವಿ ಚಂದನವನ- ಸ್ಯಾಂಡಲ್‌ವುಡ್

ಕಿರುತೆರೆ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು

ಮೈಸೂರು : ಕನ್ನಡ ಕಿರುತೆರೆಯ ಖ್ಯಾತ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇತ್ತೀಚೆಗಷ್ಟೆ ನಟಿ ರಶ್ಮಿ ಜಯರಾಜ್, ರಿಚು ಎಂಬವರ ಜೊತೆ ಮೈಸೂರಿನಲ್ಲಿ ನಿಶ್ಚಿತಾರ್ಥ ನಡೆಯಿತು.

ಕುಟುಂಬದವರು ಹುಡುಕಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಶ್ಮಿ ಮತ್ತು ರಿಚು ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತು ಹತ್ತಿರದ ಆಪ್ತರು ಮಾತ್ರ ಭಾಗಿಯಾಗಿದ್ದರು.

‘ನಟಿ ರಶ್ಮಿ ಬಣ್ಣದ ಲೋಕಕ್ಕೆ ಕಾಲಿಟ್ಟು 7 ವರ್ಷಗಳಾಗಿದೆ. ಈ ಮೊದಲು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆ ಧಾರಾವಾಹಿಯಲ್ಲಿ, ನಾಯಕಿಯಾಗಿ ಮಿಂಚಿದ್ದ ಆಶಿಕಾ ಚಂದ್ರಪ್ಪ ತಂಗಿಯ ಪಾತ್ರದಲ್ಲಿ ರಶ್ಮಿ ಕಾಣಿಸಿಕೊಂಡಿದ್ದರು.

ಮಧುಮಗಳು, ಜಸ್ಟಮಾತ್ ಮಾತಲ್ಲಿ, ನೀ ಹಚ್ಚಿದ ಕುಂಕುಮ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ. ಕನ್ನಡ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ರಶ್ಮಿ ನಟಿಸಿದ್ದಾರೆ.

ರಶ್ಮಿ ಮದುವೆ ಆಗುತ್ತಿರುವ ಹುಡುಗ ರಿಚು ಅಮೆರಿಕದ ಫ್ಲೋರಿಡಾದಲ್ಲಿ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದು, ಎಂಗೇಜ್ ಮೆಂಟ್ ಮಾಡಿಕೊಂಡಿರುವ ರಶ್ಮಿ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ.

2021 ಫೆಬ್ರವರಿಯಲ್ಲಿ ಇಬ್ಬರ ಮದುವೆ ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Related posts

ಡ್ರಗ್ಸ್ ಪ್ರಕರಣ: ನಿರ್ಮಾಪಕ ಸೌಂದರ್ಯ ಜಗದೀಶ್ ರವರನ್ನು ಸಿಸಿಬಿ ವಿಚಾರಣೆ

Harshitha Harish

ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ತಂತ್ರಜ್ಞ , ಸಂಕಲನಕಾರ ಕೋಲ ಭಾಸ್ಕರ್ ನಿಧನ

Harshitha Harish

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ದಲ್ಲಿ ಏರುಪೇರು; ಆಸ್ಪತ್ರೆ ದಾಖಲು

Harshitha Harish