ಮಂಗಳೂರು: ಜಿಲ್ಲೆಯ ಹೆಸರಾಂತ ಕಾರಣಿಕ ಕ್ಷೇತ್ರ ಪಣೋಲಿಬೈಲಿಗೆ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ತಾರ ಅನುರಾಧಾವರು ಕುಟುಂಬ ಸಹಿತ ಜನವರಿ 5 ರಂದು ಭೇಟಿ ನೀಡಿದರು.
ವಿಶೇಷ ಶಕ್ತಿ ಇರುವ ಈ ದೈವಸ್ಥಾನಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ತಾಯಿ ದರ್ಶನ ಪಡೆದು ತುಂಬಾನೆ ಸಂತೋಷವಾಯಿತು ,ಇಲ್ಲಿ ಸೇರಿರುವ ಭಕ್ತಾಧಿಗಳೇ ಇಲ್ಲಿನ ಭಕ್ತಿಗೆ ಸಾಕ್ಷಿ ಎಂದು ನಟಿ ತಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಟಿ ತಾರ ಅವರ ತಾಯಿ ಪುಷ್ಪಮ್ಮ, ಉದ್ಯಮಿಯಾಗಿರುವ ವೆಂಕಟೇಶ್ ಶ್ರೀ ಆದಿಮಾಯೆ ಮಹಾಲಕ್ಷ್ಮಿ ಮಂದಿರದ ಪಾತ್ರಿ ರಾಜೇಶ್, ಬೆಂಗಳೂರು ಉದ್ಯಮಿ ಗಣೇಶ್, ನಟ ಹರೀಶ್ ರಾಯ್, ಜೀವನ ರತನ್, ವಿಶ್ವಹಿಂದು ಪರಿಷತ್ ವಿಟ್ಲ ಪ್ರಖಂಡ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ದಯಾನಂದ ಪಣೋಲಿಬೈಲು, ಸಂತೋಷ್ ಪಣೋಲಿಬೈಲು,ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ ಮತ್ತಿತ್ತರರು ಉಪಸ್ಥಿತರಿದ್ದರು.