ಕ್ಯಾಂಪಸ್ ಸುದ್ದಿ ಪ್ರತಿಭೆ-ಪರಿಚಯ

ಪ್ರತಿಭೆ: ಕನ್ನಡ ಮಾಧ್ಯಮದಲ್ಲಿ ಓದಿ ಇಂಗ್ಲಿಷ್‌ಗೆ ಪುಸ್ತಕ ಅನುವಾದಿಸಿದ ಅಧ್ಯಯನಾ

ಪುಂಜಾಲಕಟ್ಟೆ: ಈ ಬಾಲಕಿಯ ಹೆಸರೇ ‘ಅಧ್ಯಯನಾ. ಹೆಸರಿಗೆ ತಕ್ಕಂತೆ ಅಧ್ಯಯನದಲ್ಲಿ ಮುಂದಿರುವ ಈ ಹುಡುಗಿ ಈಗಿನ್ನೂ ಪಿಯುಸಿ ಓದುತ್ತಿದ್ದಾಳೆ ಅಷ್ಟೆ. ಇಷ್ಟು ಎಳೆಯ ವಯಸ್ಸಿನಲ್ಲೇ ಕನ್ನಡದಲ್ಲಿ ಪ್ರಕಟವಾಗಿದ್ದ ಸಾಮಾನ್ಯ ಜ್ಞಾನದ (ಜನರಲ್ ನಾಲೆಡ್ಜ್) ಪುಸ್ತಕವೊಂದನ್ನು ಇಂಗ್ಲಿಷ್‌ನಲ್ಲಿ ಅಚ್ಚುಕಟ್ಟಾಗಿ ಅನುವಾದ ಮಾಡಿದ್ದಾಳೆ.

ಕನ್ನಡ ಮಾಧ್ಯಮದಲ್ಲಿ ಓದಿ ಇಂಗ್ಲಿಷ್‌ಗೆ ಕೃತಿಯ ಅನುವಾದ ಮಾಡಿರುವ ಈ ಬಾಲೆ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಆಡಿದ ಮಾತು- ‘ನನಗಿಂತ ಪ್ರತಿಭಾವಂತರು ಬಹಳ ಮಂದಿ ಇದ್ದಾರೆ. ಆದರೆ ನನಗೆ ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕಿದೆ. ಆದ್ದರಿಂದ ಇಂತಹ ಸಾಧನೆ ನನ್ನಿಂದ ಸಾಧ್ಯವಾಯಿತು. ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ಎನ್ನುವುದು ಮುಖ್ಯವಾಗುವುದಿಲ್ಲ. ಭಾಷೆಯಲ್ಲಿ ಹೇಗೆ ತೊಡಗಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಈ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುವ ಅಭ್ಯರ್ಥಿಗಳಿಗೆ ಉಪಯುಕ್ತವಾದರೆ ನನ್ನ ಶ್ರಮ ಸಾರ್ಥಕ ‘- ಇದು ಅಧ್ಯಯನಾಳ ವಿನಮ್ರತೆ ಮತ್ತು ವಯಸ್ಸಿಗೂ ಮೀರಿದ ಪ್ರಬುದ್ಧತೆಯ ಮಾತು.

ಚಾಣಕ್ಯ ಕೆರಿಯರ್ ಅಕಾಡೆಮಿ ಪ್ರಕಟಿಸಿರುವ ಕನ್ನಡದ ಸಾಮಾನ್ಯ ಜ್ಞಾನ ಪುಸ್ತಕ ಸರಣಿಯಲ್ಲಿ ಒಂದು ಕೃತಿ ಇದು. ಇದನ್ನು ಅಧ್ಯಯನಾ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾಳೆ. ಖ್ಯಾತ ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಮತ್ತು ಲೇಖಕಿ, ಉಪನ್ಯಾಸಕಿ ಪ್ರಮೀಳಾ ಚೊಕ್ಕಾಡಿ ದಂಪತಿಗಳ ಪುತ್ರಿ ಈಕೆ.

ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುವುದೇ ಹೆಗ್ಗಳಿಕೆ ಎಂಬ ‘ಸೋಗಿನ ಘನತೆ’ಯನ್ನೇ ನಂಬಿರುವ ಕಾಲದಲ್ಲಿ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಕಲಿಸುವ ನಿರ್ಧಾರ ಮಾಡಿದ್ದರು ಚೊಕ್ಕಾಡಿ ದಂಪತಿ. ಹಾಗೆ 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣಳಾದ ಪ್ರತಿಭಾವಂತೆ ಅಧ್ಯಯನಾ ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಾಗ ಹೆತ್ತವರು ಖುಷಿಯಿಂದ ಪ್ರೋತ್ಸಾಹಿಸಿದರು.

ಈ ಹಿನ್ನೆಲೆಯಲ್ಲಿ ಅಧ್ಯಯನಾ 165 ಪುಟಗಳ ಪುಸ್ತಕವೊಂದನ್ನು ಇಂಗ್ಲಿಷ್‌ಗೆ ಅನುವಾದಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪ್ರಾಣಿಗಳನ್ನು ಅವುಗಳ ಪಾಡಿಗೆ ಬದುಕಲು ಬಿಡಿ: ಪ್ರಾಣಿ ಪಕ್ಷಿ ಪ್ರೇಮಿ ತೌಸೀಫ್ ಅಹ್ಮದ್

Upayuktha

ವಿದ್ಯಾರ್ಥಿಗಳ ಮನಸ್ಸನ್ನು ಅರಿತವ ಉತ್ತಮ ಅಧ್ಯಾಪಕನಾಗಬಲ್ಲ: ಪ್ರೊ. ಬಾಲಕೃಷ್ಣ ಶೆಟ್ಟಿ

Upayuktha

ಶೀಘ್ರದಲ್ಲೇ ಪದವಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ಶೈಕ್ಷಣಿಕ ವಾರ್ಷಿಕ ವೇಳಾಪಟ್ಟಿ

Upayuktha